ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ಬೇವು ಕೃಷಿ: ಆದಾಯದ ದಾರಿ

Published : 9 ಆಗಸ್ಟ್ 2024, 4:47 IST
Last Updated : 9 ಆಗಸ್ಟ್ 2024, 4:47 IST
ಫಾಲೋ ಮಾಡಿ
Comments

ಮಂಜು ಆರ್‌.ಗಿರಿಯಾಲ

ಧಾರವಾಡ: ತಾಲ್ಲೂಕಿನ ಹೆಬ್ಬಳ್ಳಿಯ ಕೃಷಿಕ ಕಲ್ಲೇಶ ಯಲಪ್ಪ ಸಾಲಿ ಅವರು ಹೆಬ್ಬೇವು, ಶ್ರೀಗಂಧ, ಮಹಾಗನಿ ಗಿಡಗಳನ್ನು ಬೆಳೆದು ಉತ್ತಮ ಆದಾಯ ಗಳಿಸಿದ್ದಾರೆ. ಅವರ 12 ಎಕರೆ ಜಮೀನಿನಲ್ಲಿ ಅರಣ್ಯ ಕೃಷಿ, ತೋಟಗಾರಿಕೆ ಗಿಡಗಳನ್ನು ಸಮೃದ್ಧವಾಗಿ ಬೆಳೆಸಿದ್ದಾರೆ.

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹೆಸರು, ಹತ್ತಿ, ಉದ್ದು ಬೆಳೆಗಳು ಕೈಕೊಟ್ಟು ಬೇಸತ್ತಿದ್ದ ಈ ರೈತಗೆ ಹೊಸ ಪ್ರಯೋಗ ಕೈಹಿಡಿದಿದೆ. ಕೃಷಿ ಇಲಾಖೆ ಆಯೋಜಿಸಿದ್ದ ಪ್ರವಾಸದಲ್ಲಿ ಅರಣ್ಯ ಕೃಷಿ ಹಾಗೂ ಸಮಗ್ರ ಕೃಷಿ ಮಾಹಿತಿ ಪಡೆದು, ಜಮೀನಿನಲ್ಲಿ ಪ್ರಯೋಗ ಮಾಡಿದ್ಧಾರೆ.

ಧಾರವಾಡದ ಕೋಗಿಲೆಗೇರಿ ನರ್ಸರಿಯಲ್ಲಿ ಹೆಬ್ಬೇವು ಗಿಡಗಳನ್ನು‌ (ದರ ಒಂದಕ್ಕೆ ₹3) ಖರೀದಿಸಿದ್ದಾರೆ. 20 ಅಡಿ ಅಂತರದಲ್ಲಿ ಜಮೀನಿನಲ್ಲಿ ಗಿಡಗಳನ್ನು ನೆಟಿದ್ದಾರೆ.

ಆರು ಎಕರೆಯಲ್ಲಿ 2700 ಹೆಬ್ಬೇವು ಗಿಡಗಳು ನಳನಳಿಸುತ್ತಿವೆ. ಈ ಗಿಡಗಳ ಮಧ್ಯೆ ಮಹಾಗನಿ 1500 ಮತ್ತು ಶ್ರೀಗಂಧ 500 ಗಿಡಗಳನ್ನು ಬೆಳೆದಿದ್ದಾರೆ.

ಸಾವಯವ ಕೃಷಿಗೆ ಒತ್ತು ನೀಡಿದ್ದೇನೆ. ಗೊಬ್ಬರವನ್ನು ಎರೆಹುಳು ಘಟಕದಲ್ಲಿ ತಯಾರಿಸುತ್ತೇನೆ. ಹೆಬ್ಬೇವು ಮರವನ್ನು ಪ್ಲೈವುಡ್ ತಯಾರಿಕೆಗೆ ಬಳಸುತ್ತಾರೆ, ‌ಹೆಬ್ಬೇವಿಗೆ ಬೇಡಿಕೆ ಇದೆ. ಈಗ ಕ್ವಿಂಟಲ್‌ಗೆ ₹800 ದರ ಇದೆ. 1200 ಮರ ಮಾರಾಟ ಮಾಡಿದ್ದೇನೆ. ₹9 ಲಕ್ಷ ಆದಾಯ ಗಳಿಸಿದ್ದೆನೆ. ಹೆಬ್ಬೇವು, ಶ್ರೀಗಂಧ, ಮಹಾಗನಿ ಕೃಷಿಗೆ ₹1.50ಲಕ್ಷ ಖರ್ಚಾಗಿದೆ. ಅರಣ್ಯ ಇಲಾಖೆಯಿಂದ ಅರಣ್ಯ ಕೃಷಿ ಪ್ರೊತ್ಸಾಹ ಯೋಜನೆಯಡಿ ₹90 ಸಾವಿರ ನೆರವು ನೀಡಿದ್ಧಾರೆ’ ಎಂದು ಬೆಳೆಗಾರ ಕಲ್ಮೇಶ್ ಸಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲಹಾಬಾದ್‌ನ ಫ್ಲೈವುಡ್ ಕಂಪನಿಯವರು ಇಲ್ಲಿಗೆ ಬಂದು ಮರಗಳನ್ನು ಕಟಾವು ಮಾಡಿಕೊಂಡು ಒಯ್ಯುತ್ತಾರೆ. ಶ್ರೀಗಂಧ ಮತ್ತು ಮಹಾಗನಿ ಗಿಡಗಳು 12 ವರ್ಷದ ನಂತರ ಕಟಾವಿಗೆ ಬರುತ್ತವೆ. ಮೈಸೂರು ಸ್ಯಾಂಡಲ್ ಸೋಪ್‌ ಕಂಪನಿಯವರು ಶ್ರೀಗಂಧಕ್ಕೆ ಗಿಡ ಖರೀದಿ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.

ಕೃಷಿ ಹೊಂಡ, ಕೊಳಬಾವಿಯಿಂದ ಹನಿ ನೀರಾವರಿ ಮತ್ತು ಕಾಲುವೆ ಮೂಲಕ ಗಿಡಗಳಿಗೆ ನೀರುಣಿಸುತ್ತಾರೆ. ಎರಡು ಎಕರೆಯಲ್ಲಿ ಬಾಳೆ, ಮೆಣಸಿನಕಾಯಿ, ಸೌತೆಕಾಯಿ, ಕೊತ್ತಂಬರಿ ಮೊದಲಾದವನ್ನು ಬೆಳೆದಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಕೃಷಿ ಅಧಿಕಾರಿಗಳು ಕಳೆದ ತಿಂಗಳು ಜಮೀನಿಗೆ ಭೇಟಿ ಬೆಳೆ ವೀಕ್ಷಿಸಿದ್ಧಾರೆ.

ಕಲ್ಲೇಶ ಸಾಲಿ ರೈತ ಹೆಬ್ಬಳ್ಳಿ
ಕಲ್ಲೇಶ ಸಾಲಿ ರೈತ ಹೆಬ್ಬಳ್ಳಿ
ಹೆಬ್ಬಳ್ಳಿಯ ಜಮೀನಿನಲ್ಲಿ ಬೆಳೆದಿರುವ ಹೆಬ್ಬೇವು ಹಾಗೂ ಶ್ರೀಗಂಧ ಗಿಡಗಳು
ಹೆಬ್ಬಳ್ಳಿಯ ಜಮೀನಿನಲ್ಲಿ ಬೆಳೆದಿರುವ ಹೆಬ್ಬೇವು ಹಾಗೂ ಶ್ರೀಗಂಧ ಗಿಡಗಳು

ಕಡಿಮೆ ಖರ್ಚಿನಲ್ಲಿ ಹೆಬ್ಬೇವು ಗಿಡಗಳನ್ನು ಬೆಳೆಯಬಹುದು. ನೀರು ಗೊಬ್ಬರ ಸರಿಯಾಗಿ ಪೂರೈಸಿದರೆ ಮೂರರಿಂದ ನಾಲ್ಕು ವರ್ಷದಲ್ಲಿ ಆದಾಯ ಗಳಿಸಬಹುದು

. ಕಲ್ಲೇಶ ಸಾಲಿ ರೈತ ಹೆಬ್ಬಳ್ಳಿ

ರೈತ ಕಲ್ಮೇಶ ಅವರಿಗೆ ಸಮಗ್ರ ಕೃಷಿ ಪದ್ದತಿ ಯೋಜನೆಯಡಿ ಎರೆಹುಳು ಘಟಕ ಕೃಷಿಹೊಂಡ ಹಸು ಖರೀದಿಸಲು ಹಾಗೂ ಬದು ನಿರ್ಮಾಣಕ್ಕೆ ಸಹಾಯಧನ ನೀಡಲಾಗಿತ್ತು. ಯೋಜನೆ ಬಳಸಿಕೊಂಡು ಸಮಗ್ರ ಕೃಷಿಯೊಂದಿಗೆ ಹೆಬ್ಬೇವು ಶ್ರೀಗಂಧ ಮಹಾಗನಿ ಗಿಡಗಳನ್ನು ಚೆನ್ನಾಗಿ ಬೆಳೆದಿದ್ದಾರೆ -ರೇಖಾ ಬೆಳ್ಳಟ್ಟಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಅಮ್ಮಿಬಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT