ಅಳ್ನಾವರ: ‘ಪಟ್ಟಣದ ಕಡು ಬಡವರಿಗೆ ಬಹಳ ವರ್ಷದಿಂದ ಆಶ್ರಯ ಯೋಜನೆಯಡಿ ಮನೆ ಹಂಚಿಕೆ ಆಗಿಲ್ಲ. ನಿವೇಶನಕ್ಕಾಗಿ ಜನರ ಬೇಡಿಕೆ ಇದೆ. ಸಚಿವ ಸಂತೋಷ್ ಲಾಡ್ ಅವರ ಸೂಚನೆಯಂತೆ ಸೂಕ್ತ ಜಾಗ ಖರೀದಿಗೆ ಜಾಗ ಗುರುತಿಸಲಾಗಿದೆ’ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣಿ ಶಿರೂರ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿ, ‘ಪಟ್ಟಣದ ಹೊರ ವಲಯದಲ್ಲಿ ಖಾಸಗಿ ಮಾಲೀಕತ್ವದ ಜಾಗ ನೋಡಿದ್ದೇವೆ. ಭೂಮಿಯ
ಮಾಲೀಕರನ್ನು ಸಭೆಗೆ ಕರೆಯಲಾಗಿದೆ. ದರ ಪಟ್ಟಿ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.
‘ಈ ಬಾರಿ ಬೇಸಿಗೆಯಲ್ಲಿ ಜನರಿಗೆ ಯಾವುದೇ ತೊಂದರೆ ಆಗದಂತೆ ಕಾಳಿ ನದಿ ನೀರು ದೊರೆತಿದೆ’ ಎಂದು ಸದಸ್ಯರು ಸಂತಸ ವ್ಯಕ್ತಪಡಿಸಿದರು.
ಜಲ ಮಂಡಳಿಯ ಏಂಜಿನಿಯರ್ ರವಿಕುಮಾರ, ‘ಕಾಳಿ ನದಿ ನೀರು ತಂದಿದ್ದರಿಂದ ಪ್ರತಿ ತಿಂಗಳು ಸುಮಾರು 60 ಲಕ್ಷ ಯುನಿಟ್ ವಿದ್ಯುತ್ ಬಳಕೆ ತಗ್ಗಿದೆ’ ಎಂದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ ಮುಗದುಮ್, ಸದಸ್ಯರಾದ ರೂಪೇಶ ಗುಂಡಕಲ್, ಮಧು ಬಡಸ್ಕರ್, ಅಮೂಲ ಗುಂಜೀಕರ, ನದೀಮ ಕಾಂಟ್ರ್ಯಾಕ್ಟರ್, ರೇಶ್ಮಿ ತೇಗೂರ, ಭಾಗ್ಯವತಿ ಕುರುಬರ, ನೇತ್ರಾವತಿ ಕಡಕೋಳ, ಮಂಗಳಾ ರವಳಪ್ಪನವರ, ಯಲ್ಲಪ್ಪ ಹೂಲಿ, ರಮೇಶ ಕುನ್ನೂರಕರ, ಯಲ್ಲಾರಿ ಹುಬ್ಳಿಕರ, ಜೈಲಾನಿ ಸುದರ್ಜಿ ಹಾಗೂ ಜಮೀನು ಮಾಲೀಕರಾದ ಪ್ರಭಾಕರ ಪಾಟೀಲ, ರಾಜು ಮುನವಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.