ಧಾರವಾಡ: ‘ಅವಿಭಿಜಿತ ಧಾರವಾಡ ಜಿಲ್ಲೆಯ ಸಂಗೀತ ದಿಗ್ಗಜರ ಕರ್ಮಭೂಮಿಯ ಸಂಗೀತದಿಂದಲೇ ಈ ಮಣ್ಣಿನ ಹೆಸರು ವಿಶ್ವವ್ಯಾಪಿಯಾಗಿದೆ’ ಎಂದು ಹಿರಿಯ ಹಿಂದೂಸ್ಥಾನಿ ಗಾಯಕ ಪಂ.ಕೃಷ್ಣರಾವಬುವಾ ಇನಾಮದಾರ ಹೇಳಿದರು.

ಮಹಾಶಿವರಾತ್ರಿ ಸಂಗೀತೋತ್ಸವ ಸಮಿತಿಯು ಮುದಿಮಾರುತಿ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 47ನೇ ವರ್ಷದ ಶಿವರಾತ್ರಿ ಸಂಗೀತೋತ್ಸವದಲ್ಲಿ ಸಾಧಕ ಶಿವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಪಂ.ಪಂಚಾಕ್ಷರಿ ಗವಾಯಿಗಳು, ಪಂ.ಪುಟ್ಟರಾಜ ಗವಾಯಿಗಳು, ಸವಾಯಿ ಗಂಧರ್ವರು, ಡಾ.ಮಲ್ಲಿಕಾರ್ಜುನ ಮನಸೂರ, ಡಾ.ಗಂಗೂಬಾಯಿ ಹಾನಗಲ್, ಪಂ.ಬಸವರಾಜ ರಾಜಗುರು, ಉಸ್ತಾದ್ ಅಬ್ದುಲ್ ಕರೀಮಖಾನ್, ಸಿತಾರರತ್ನ ರಹಿಮತ್‌ಖಾನ್ ಇನ್ನೂ ಅನೇಕ ಸಂಗೀತ ರತ್ನಗಳಿಗೆ ಧಾರವಾಡದ ಹೆಸರು ವಿಶ್ವವ್ಯಾಪಿಗೊಳಿಸಿದ ಕೀರ್ತಿ ಸಲ್ಲುತ್ತದೆ’ ಎಂದರು.

ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ನಾದಶಿವ ಸಂಗೀತ ವಿದ್ಯಾಲಯ, ಗುರುರಾಜ ಭಜನಾ ಮಂಡಳಿ ಹಾಗೂ ಓಂಕಾರ ಮಹಿಳಾ ಭಜನಾ ಮಂಡಳಿಯಿಂದ ಭಕ್ತಿ ಸಂಗೀತ, ರೇವತಿ ಅನಿಲಕುಮಾರ ಮತ್ತು ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸುಗಮ ಸಂಗೀತ, ಡಾ. ಗುರುಬಸವ ಮಹಾಮನೆ ಮತ್ತು ಶಿಷ್ಯ ವೃಂದದಿಂದ ವಯೋಲಿನ್ ಕಾರ್ಯಕ್ರಮ ಡಾ. ಶ್ರೀಹರಿ ದಿಗ್ಗಾವಿ ಮತ್ತು ಶಿಷ್ಯ ವೃಂದದಿಂದ ತಬಲಾ ವಾದನ ಶ್ರೋತೃಗಳ ಮನ ತಣಿಸಿತು.

ಶ್ರೀಧರ ಭಜಂತ್ರಿ ಅವರ ಶಹನಾಯಿ ವಾದನದಲ್ಲಿ ರಾಗ ಚಂದ್ರಕೌಂಸ್, ಬೆಂಗಳೂರಿನ ಅನುಪಮಾ ಭಟ್ ರಾಗ ಬಿಹಾಗ, ನಾಟ್ಯಗೀತೆ ದಾದ್ರಾ ಮತ್ತು ಅಭಂಗ ಪ್ರಸ್ತುತ ಪಡಿಸಿದರು. ಅಮೋದಿನಿ ಮಹಾಲೆ ಅವರ ದಾಸವಾಣಿ ಕಾರ್ಯಕ್ರಮ ಜರುಗಿತು. ಪಂ. ಸತೀಶ ಭಟ್, ಮಾಳಕೊಪ್ಪ ರಾಗ ಕಲಾವತಿ, ಮಾಲಕೌಂಸ ಪ್ರಸ್ತುತ ಪಡಿಸಿದರು. ಪಂ. ಕುಮಾರ ಮರಡೂರ ರಾಗ ನಟ್ ಭೈರವ, ಸ್ವರಚಿತ ವಿಲಂಬಿತ ಕಯಾಲ ಜುಬ್ರಾ ತಾಳದಲ್ಲಿ ಹೇ ಮಹಾದೇವ, ದೃತ್ ತೀನ ತಾಳದಲ್ಲಿ ಡಬರು ಡಮ ಡಮ ಬಾಜೆ ಪ್ರಸ್ತುತ ಪಡಿಸಿದರು.

ವಾದ್ಯ ಸಹಕಾರದಲ್ಲಿ ತಬಲಾದಲ್ಲಿ ಶ್ರೀಧರ ಮಾಂಡ್ರೆ, ಡಾ.ಶ್ರೀಹರಿ ದಿಗ್ಗಾವಿ, ನಾಗಲಿಂಗ ಮುರಗಿ, ವಿಜಯಕುಮಾರ ಸುತಾರ, ತುಕಾರಾಂ ಮಡಿವಾಳ, ರಾಹುಲ್ ಪಾಟೀಲ, ದಾಮೋದರ ಪಾಮಡಿ ಹಾಗೂ ಹಾರ್ಮೊನಿಯಂದಲ್ಲಿ ಕೆ.ಜಿ.ಪಾಟೀಲ, ಭರತ್ ಹೆಗಡೆ, ಬಸವರಾಜ ಹಿರೇಮಠ, ವಿನೋದ ಪಾಟೀಲ, ಪ್ರಮೋದ ಹೆಬ್ಬಳ್ಳಿ ಹಾಗೂ ಸೋಹಿಲ್ ಸಯ್ಯದ್, ತಾಳವಾದ್ಯದಲ್ಲಿ ಸುಧೀಂದ್ರಾಚಾರ್ ಸಿದ್ಧಾಪುರ ಸಾಥ ಸಂಗತ್ ನೀಡಿದರು.

ಕಾರ್ಯಕ್ರಮದಲ್ಲಿ ಸಾಧಕ ಶಿವ ಪ್ರಶಸ್ತಿಯನ್ನು ಖಾತ ಹಿಂದೂಸ್ಥಾನಿ ಗಾಯಕರಾದ ಪಂ.ಕೃಷ್ಣರಾವಬುವಾ ಇನಾಮದಾರ, ಪಂ.ಕುಮಾರ ಮರಡೂರ ಹಾಗೂ ಪಂ.ಸತೀಶ ಭಟ್ ಮಾಳಕೊಪ್ಪ ಹಾಗೂ ಕಲಾಪೋಷಕ ಸಾಧಕ ಶಿವ ಪ್ರಶಸ್ತಿಯನ್ನು ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಮತ್ತು ಸಾಧಕ ಶಿವ ಸಮ್ಮಾನ ಭರತ್ ಹೆಗಡೆ, ಶಿರಸಿ, ಅನುಪಮಾ ಭಟ್, ಯಲ್ಲಾಪೂರ ಇವರಿಗೆ ಪ್ರದಾನ ಮಾಡಲಾಯಿತು.

ಮಹಾಶಿವರಾತ್ರಿ ಸಂಗೀತೋತ್ಸವ ಸಮಿತಿ ಸಂಚಾಲಕ ವೀರಣ್ಣ ಪತ್ತಾರ ಪ್ರಾಸ್ತಾವಿಕ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.