ಅಣ್ಣಿಗೇರಿ: ‘ಆಧುನಿಕ ಯುಗದಲ್ಲಿ ವಿಜ್ಞಾನ-ತಂತ್ರಜ್ಞಾನ ಬಹಳಷ್ಟು ಮುಂದುವರೆದು ಹೊಸ ಹೊಸ ಆವಿಷ್ಕಾರಗಳನ್ನು ಹುಟ್ಟು ಹಾಕುತ್ತಿರುವುದು ಸಂತೋಷದಾಯಕ. ಇಂತಹ ಆವಿಷ್ಕಾರಗಳ ಮಾದರಿಗಳನ್ನು ಶಾಲಾ ವಿದ್ಯಾರ್ಥಿಗಳು ಸಣ್ಣ ಪ್ರಮಾಣದಲ್ಲಿ ತಯಾರಿಸಿ ಶಾಲಾ ಹಂತದಲ್ಲಿ ಪ್ರಸ್ತುತ ಪಡಿಸುತ್ತಿರುವ ಕಾರ್ಯ ಶ್ಲಾಘನೀಯ. ಹೀಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲಿ’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ತಾಲ್ಲೂಕಿನ ಮಣಕವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಗಬೇಕಾಗಿದೆ. ತಂತ್ರಜ್ಞಾನದ ಬಳಕೆಯಿಂದ ಹೊಸ ಹೊಸ ಪ್ರಯೋಗಗಳನ್ನು ಕಂಡು ಹಿಡಿಯಬೇಕಾಗಿದೆ. ಇದಕ್ಕೆ ಬೇಕಾಗುವ ಎಲ್ಲ ಸೌಲಭ್ಯ ನೀಡಲು ನಾನು ಸಿದ್ಧ’ ಎಂದರು.

ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನದ ಪ್ರಯೋಗಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಮನವಿ ಸ್ವೀಕರಿಸಿ ಶಾಲೆಗೆ ಭೌತಿಕ ಸೌಲಭ್ಯ ಒದಗಿಸುವುದಾಗಿ ಹೇಳಿದರು.

ವಿಜ್ಞಾನ ಪ್ರದರ್ಶನದಲ್ಲಿ ಜಾಗತಿಕ ತಾಪಮಾನ, ಭೂಮಿಯನ್ನು ರಕ್ಷಿಸಿ, ಆಮ್ಲ-ಪ್ರತ್ಯಾಮ್ಲ, ಸೌರ್ಯವ್ಯೂಹ, ಆಯಸ್ಕಾಂತೀಯ ಗುಣಗಳು, ಮಾನವನ ಶ್ವಾಸಕಾಂಗ ವ್ಯೂಹ, ಮಾನವನ ಜೀರ್ಣಾಂಗ ವ್ಯವಸ್ಥೆ, ಮೂತ್ರ ಪಿಂಡಗಳ ಮಾದರಿ, ಹೃದಯದ ಕಾರ್ಯ, ಗಾಳಿಯ ಮೇಲ್ಮುಖ, ಕೆಳಮುಖ ಒತ್ತಡ ಸೇರಿದಂತೆ ವಿವಿಧ ವಿಜ್ಞಾನದ ಮಾದರಿಗಳು ಹಾಗೂ ವಿಜ್ಞಾನಿಗಳ ಸಂಶೋಧನೆಗಳು ಗಮನ ಸೆಳೆದವು.

ಸಮಾಜದ ವಿಷಯವಾಗಿ ಹಳೆಯ ನಾಣ್ಯಗಳ ಪ್ರದರ್ಶನ, ಗ್ರಾಮೀಣ ಜನಜೀವನ ಮತ್ತು ಶಹರ ಜನಜೀವನ ಅಲ್ಲಿಯ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳು ತಯಾರಿಸಿ ಪ್ರಸ್ತುತ ಪಡಿಸಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ.ಹಿರೇಮಠ, ಮುಖ್ಯ ಶಿಕ್ಷಕ ಬಿ.ವಿ.ಅಂಗಡಿ, ಶಾಂತವೀರಗೌಡ ಪಾಟೀಲ, ರೇವಣಪ್ಪ ಅಂಕಲಿ, ಮಹಾದೇವಪ್ಪ ಡೊಳ್ಳಿನ, ವೀರಣ್ಣ ಕುಂದಗೋಳ, ದೇವರಾಜ ಹುಗ್ಗಣ್ಣವರ, ನಿಂಗನಗೌಡ ಪಾಟೀಲ, ಪಂಕಜಾ ಪುರೋಹಿತ, ಎ.ಆರ್.ಅಕ್ಕಿ, ಎಲ್.ಎಂ.ಗಡ್ಡಿ, ಅನ್ವರಬಾಷಾ ಹುಬ್ಬಳ್ಳಿ, ಮಂಜುನಾಥ ನಾಯಕ, ಎ.ಎಂ.ದೊಡ್ಡಮನಿ, ರವಿ ಬೆಂತೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.