ಶನಿವಾರ, ಏಪ್ರಿಲ್ 4, 2020
19 °C

ತುಂಡಾದ ಲಿಫ್ಟ್‌ ಕೇಬಲ್: ಒಂಬತ್ತು ಜನರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಸಾಧೂನವರ ಎಸ್ಟೇಟ್‌ನಲ್ಲಿರುವ ಧ್ವಾರವಾಟಿಕಾ ಹೊಟೇಲ್‌ನಲ್ಲಿ ಆಕಸ್ಮಿಕವಾಗಿ ಲಿಫ್ಟ್‌ ಕೇಬಲ್ ಕಟ್ ಆದ ಪರಿಣಾಮ, ಲಿಫ್ಟ್‌ನಲ್ಲಿದ್ದ 11 ಜನರ ಪೈಕಿ ಒಂಭತ್ತು ಜನರಿಗೆ ತೀವ್ರ ಗಾಯಗಳಾದ ಪ್ರಕರಣ ಭಾನುವಾರ ನಡೆದಿದೆ.

ಒಂಭತ್ತು ಜನರ ಕಾಲುಗಳಿಗೆ ಪೆಟ್ಟಾಗಿದ್ದು, ಬೇಲೂರು ಕೈಗಾರಿಕಾ ಪ್ರದೇಶದ ಸ್ಟಾರ್ ಕಂಪನಿ ಸಿಬ್ಬಂದಿಯಾಗಿದ್ದಾರೆ.

ರಾತ್ರಿ ಊಟ ಮುಗಿಸಿ ಮರಳುವಾಗ ಈ ಘಟನೆ ನಡೆದಿದೆ. ಕೆಂಪಯ್ಯ ಪುರಾಣಿಕ (34), ಆಂಟೋನಿ (44), ಬಶೀರ್‌ ಅಹ್ಮದ್‌ (22) ಅನಿಲ ರಾಮಸಿಂಗ್ (34), ಆನಂದ ಪವಾರ್ (32) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ನಾಲ್ವರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಲಿಫ್ಟ್‌ ತಾಂತ್ರಿಕ ಸಿಬ್ಬಂದಿ ಈರಣ್ಣ  ‘ನಿಗದಿತ ಭಾರಕ್ಕಿಂತ ಹೆಚ್ಚಿನ ಜನರು ಲಿಫ್ಟ್‌ನ್ನು ಬಳಸಿದ್ದರಿಂದ ಕೇಬಲ್ ಕಟ್ ಆಗಿದೆ. ಲಿಫ್ಟ್‌ನ್ನು ಎಂಟು ಜನ ಮಾತ್ರ ಬಳಸಬಹುದು. ಆದರೆ, 11 ಜನರು ಲಿಫ್ಟ್‌ನಲ್ಲಿ ಹತ್ತಿರುವುದರಿಂದ ಈ ಅವಘಡ ಸಂಭವಿದೆ’ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಉಪನಗರ ಠಾಣೆ ಸಿಪಿಐ, ‘ರಾತ್ರಿ ಸುಮಾರು 11.30ರ ಹೊತ್ತಿಗೆ ಅವಘಡ ಸಂಭವಿಸಿದೆ. 5ನೇ ಮಹಡಿಯಲ್ಲಿರುವ ಹೋಟೆಲಿನಲ್ಲಿ ಊಟ ಮುಗಿಸಿ ಎಲ್ಲರೂ ಲಿಫ್ಟ್‌ ಹತ್ತಿದ್ದಾರೆ. ಮೂರನೇ ಮಹಡಿಯಲ್ಲಿರುವಾಗ ಕೇಬಲ್ ತುಂಡಾಗಿದ್ದರಿಂದ ಲಿಫ್ಟ್ ರಭಸದಿಂದ ನೆಲಕ್ಕೆ ಅಪ್ಪಳಿಸಿದೆ. ಇದರಿಂದಾಗಿ ಕೆಲವರಿಗೆ ಪೆಟ್ಟಾಗಿದೆ. ನಾಲ್ಕು ಜನ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಮರಳಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು