ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: 29ರಿಂದ ಸುಪ್ರೀಂ ಕೋರ್ಟ್‌ ಲೋಕ ಅದಾಲತ್‌

Published 3 ಜೂನ್ 2024, 15:58 IST
Last Updated 3 ಜೂನ್ 2024, 15:58 IST
ಅಕ್ಷರ ಗಾತ್ರ

ಧಾರವಾಡ: ಸುಪ್ರೀಂ ಕೋರ್ಟ್‌ನಲ್ಲಿ ಜುಲೈ 29ರಿಂದ ಆಗಸ್ಟ್‌ 3ರವರೆಗೆ ಲೋಕ ಅದಾಲತ್‌ ನಡೆಯಲಿದೆ. ಪಕ್ಷಗಾರರು ಪ್ರಕರಣಗಳನ್ನು ರಾಜೀ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಕೆ.ಜಿ.ಶಾಂತಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಕ್ಷಗಾರರು ವಿಡಿಯೋ ಕಾನ್ಪರೆನ್ಸ್‌ (ವಿ.ಸಿ) ಮೂಲಕ ಹಾಜರಾಗಲು ಅವಕಾಶ ಇದೆ. ಪಕ್ಷಗಾರರಿಗೆ ನೋಟಿಸ್‌ ತಲುಪಿಸಲು ತಲುಪಿಸಲು ಜಿಲ್ಲಾ ಕೋರ್ಟ್‌ ವ್ಯವಸ್ಥೆ ಮಾಡಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಧಾರವಾಡ ಜಿಲ್ಲೆಯ 41 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಜುಲೈ 13ರಂದು ಲೋಕ ಅದಾಲತ್‌ ಜಿಲ್ಲೆಯಲ್ಲಿ ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಜಿಲ್ಲೆಯ ಕೋರ್ಟ್‌ಗಳಲ್ಲಿ ಬಾಕಿ ಇರುವ ಸಿವಿಲ್‌ ದಾವೆ, ಚೆಕ್‌ ಬೌನ್ಸ್‌ ಪ್ರಕರಣ, ಕೌಟುಂಬಿಕ ಪ್ರಕರಣ (ವಿವಾಹ ವಿಚ್ಛೇದನ ಹೊರತುಪಡಿಸಿ), ಅಪಘಾತ ಪ್ರಕರಣ, ಆಸ್ತಿ ಪಾಲು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ರಾಜೀ ಸಂಧಾನಕ್ಕೆ ಒಟ್ಟು 10,704 ಪ್ರಕರಣಗಳನ್ನು (ಮೇ 30) ಗುರುತಿಸಲಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಇದೆ ಎಂದರು.

ಕಳೆದ ವರ್ಷ ಡಿಸೆಂಬರ್ 9ರಂದು ನಡೆದ ಲೋಕ ಅದಾಲತ್‌ನಲ್ಲಿ 12,827 ಪ್ರಕರಣಗಳನ್ನು ಇತ್ಯರ್ಥ‍ಪಡಿಸಲಾಗಿದೆ. 75,091 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 74,419 ಪ್ರಕರಣ ಪರಿಹರಿಸಲಾಗಿದೆ. ಮಾರ್ಚ್ 16 ರಂದು ನಡೆದ ಅದಾಲತ್‌ ನಲ್ಲಿ 13,284 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರುಶರಾಮ ದೊಡ್ಡಮನಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT