ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಡಿಕ್ಕಿ: ರಸ್ತೆ ಪಾಲಾದ ಮೊಟ್ಟೆಗಳು

Last Updated 9 ಮಾರ್ಚ್ 2021, 7:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮೊಟ್ಟೆಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿಯೊಂದು ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮೊಟ್ಟೆಗಳು ಒಡೆದು ಹಾಳಾಗಿರುವ ಘಟನೆ ಮಂಗಳವಾರ ನಡೆದಿದೆ.

ಹುಬ್ಬಳ್ಳಿ- ಗದಗ ಮಾರ್ಗದ ಐಟಿಸಿ ಕಾರ್ಖಾನೆ ಸಮೀಪ ಘಟನೆ ಜರುಗಿದೆ. ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿದ್ದ ಮೊಟ್ಟೆಗಳ ಮೇಲೆಯೇ ವಾಹನಗಳು ‌ಸಾಗುತ್ತಿದ್ದ‌ ಚಿತ್ರಣ ಕಂಡು ಬಂತು.

ಮೊಟ್ಟೆಗಳನ್ನು ತುಂಬಿದ್ದ ಲಾರಿ ಕೊಪ್ಪಳದಿಂದ ಕುಮಟಾಕ್ಕೆ ಹೊರಟಿತ್ತು. ಅದಿರು ತುಂಬಿಕೊಂಡು‌ ರಸ್ತೆ ಬದಿ ನಿಂತಿದ್ದ ಲಾರಿ ಗೋವಾಕ್ಕೆ ಹೊರಟಿತ್ತು. ಯಾರಿಗೂ ಜೀವಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT