ಧಾರವಾಡ: ಇಲ್ಲಿನ ಕುಂಭಾಪುರ ಫಾರಂನ ತರಕಾರಿ ಬೆಳೆ ಉತ್ಕೃಷ್ಟತಾ ಕೇಂದ್ರದ ಆವರಣದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಒಂದು ಎಕರೆ ಜಾಗ ಮಂಜೂರಾಗಿದ್ದು, ಕಟ್ಟಡ ಕಾಮಗಾರಿ ಶುರುವಾಗಿದೆ. 2026ರ ಜೂನ್ನಲ್ಲಿ ಕೇಂದ್ರದ ಚಟುವಟಿಕೆ ಆರಂಭಿಸಲು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮ ಉದ್ದೇಶಿಸಿದೆ.

ಕೇಂದ್ರ ಸ್ಥಾಪನೆಗೆ ರಾಷ್ಟ್ರೀಯ ವಿಕಾಸ ಯೋಜನೆಯಡಿ ₹6 ಕೋಟಿ ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ಕೇಂದ್ರದ ಪಾಲು ಶೇ 55ರಷ್ಟು ಹಾಗೂ ರಾಜ್ಯದ ಪಾಲು ಶೇ 45 ರಷ್ಟಿದೆ. ಕೊಯ್ಲೋತ್ತರ ತಂತ್ರಜ್ಞಾನ, ಮಾವು ಸಂಸ್ಕರಣೆ (ರಫ್ತು ಗುಣಮಟ್ಟ), ಪ್ಯಾಕಿಂಗ್ ಮೊದಲಾದ ವ್ಯವಸ್ಥೆ ಕಲ್ಪಿಸಲು ಯೋಜನೆ ಸಿದ್ಧಪಡಿಸಲಾಗಿದೆ.

‘ಬೆಳೆಗಾರರ ನಿರಂತರ ಪ್ರಯತ್ನದ ಫಲವಾಗಿ ಮಾವು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಸರ್ಕಾರ ಕ್ರಮವಹಿಸಿದೆ. ನೈಸರ್ಗಿಕ ವಿಧಾನದಲ್ಲಿ ಮಾವು ಮಾಗಿಸಿ, ಆರೋಗ್ಯಕರ ಹಣ್ಣುಗಳನ್ನು ಜನರಿಗೆ ತಲುಪಿಸುವ ಉದ್ದೇಶವಿದೆ. ಸಂಸ್ಕರಣೆ, ಪ್ಯಾಕೇಜಿಂಗ್, ಮಧ್ಯವರ್ತಿ ಇಲ್ಲದೆ ಬೆಳೆಗಾರರೇ ವಿದೇಶಗಳಿಗೆ ರಫ್ತು ಮಾಡಿ ಆದಾಯ ಗಳಿಸುವ ಕುರಿತು ಕೇಂದ್ರದಲ್ಲಿ ಮಾಹಿತಿ ಪಡೆಯಬಹುದಾಗಿದೆ’ ಎಂದು ಮಾವು ಬೆಳೆಗಾರರ ಬಳಗದ ಸುಭಾಷ ಆಕಳವಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಧಾರವಾಡ ಜಿಲ್ಲೆಯ ತೋಟಗಾರಿಕೆ ಬೆಳೆಗಳಲ್ಲಿ ಮಾವು ಪ್ರಮುಖವಾಗಿದೆ. ಈ ಭಾಗದಲ್ಲಿ ಬೆಳೆಯುವ ‘ಆಪೂಸಾ’ (ಅಲ್ಫಾನ್ಸೊ) ಮಾವು ವಿಶಿಷ್ಟ ರುಚಿಗೆ ಹೆಸರಾಗಿದೆ. ಕಳೆದ ವರ್ಷ ಈ ಭಾಗದ ಕೆಲವು ಬೆಳೆಗಾರರು ಮಾವಿನ ಹಣ್ಣುಗಳನ್ನು ವಿದೇಶಗಳಿಗೆ ರಫ್ತು ಮಾಡಿದ್ಧಾರೆ’ ಎಂದರು.

‘ಈ ಕೇಂದ್ರದಲ್ಲಿ ಬಿಸಿ ನೀರಿನ ಉಪಚಾರ (ಹಾಟ್ ವಾಟರ್ ಟ್ರೀಟ್ಮೆಂಟ್) ಘಟಕ ಅಳವಡಿಸುತ್ತಾರೆ. ಹಣ್ಣಿನಲ್ಲಿ ಹುಳು ಆಗದಂತೆ ನಿರ್ವಹಣೆ ಮಾಡಲು ಇದರಿಂದ ಅನುಕೂಲವಾಗಲಿದೆ. ಹಣ್ಣು ಮಾಗಿಸುವ ಘಟಕ, ಶೈತ್ಯಾಗಾರ ಮೊದಲಾದವು ಕೇಂದ್ರದಲ್ಲಿ ಇರುತ್ತವೆ. ರಫ್ತು ಉತ್ತೇಜನ ನೀಡುವುದು ಕೇಂದ್ರದ ಉದ್ದೇಶ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ ತಿಳಿಸಿದರು.

ಒಂದು ಎಕರೆ ಜಾಗದಲ್ಲಿ ಕಟ್ಟಡ ಒಟ್ಟು ₹6 ಕೋಟಿ ವೆಚ್ಚ ರಫ್ತು ಉತ್ತೇಜನಕ್ಕೆ ಆದ್ಯತೆ

‘ಮಾರ್ಚ್ಗೆ ಕಟ್ಟಡ ಪೂರ್ಣಗೊಳಿಸಲು ಸೂಚನೆ’

‘₹6 ಕೋಟಿ ಅನುದಾನದಲ್ಲಿ ಮಾವು ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ₹2.95 ಕೋಟಿ ಬಳಕೆಯಾಗಲಿದೆ. 2026 ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ₹3.05 ಕೋಟಿಯಲ್ಲಿ ಯಂತ್ರೋಪಕರಣ ಖರೀದಿಸಲಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ತಿಳಿಸಿದರು. ‘2026 ಜೂನ್ ಹೊತ್ತಿಗೆ ಕೇಂದ್ರವನ್ನು ಆರಂಭಿಸಿ ಕಾರ್ಯ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಮಾವು ಬೆಳೆಗಾರರಿಗೆ ಇದು ಅನುಕೂಲಕಾರಿ ಆಗಲಿದೆ’ ಎಂದರು.

ಮಾವು ತೋಟ ವಿಸ್ತೀರ್ಣ ಉತ್ಪಾದನೆ ಅಂಕಿಅಂಶ (2025 ಮಾರ್ಚ್) ತಾಲ್ಲೂಕು;ವಿಸ್ತೀರ್ಣ;ಉತ್ಪಾದನೆ; ಧಾರವಾಡ;8590.65;78195; ಅಳ್ನಾವರ;1637.35;14838; ಹುಬ್ಬಳ್ಳಿ;656.38;5851.6; ಹುಬ್ಬಳ್ಳಿನಗರ;280.88;2551.5; ಕಲಘಟಗಿ;2178.54;19207; ಕುಂದಗೋಳ;160.55;1449.4; ಒಟ್ಟು;13504.35;122093 ವಿಸ್ತೀರ್ಣ: ಹೆಕ್ಟೇರ್ಗಳಲ್ಲಿ ಉತ್ಪಾದನೆ: ಮೆಟ್ರಿಕ್ ಟನ್ಗಳಲ್ಲಿ (ಮಾಹಿತಿ: ತೋಟಗಾರಿಕೆ ಇಲಾಖೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.