ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ: ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

Published 31 ಡಿಸೆಂಬರ್ 2023, 15:44 IST
Last Updated 31 ಡಿಸೆಂಬರ್ 2023, 15:44 IST
ಅಕ್ಷರ ಗಾತ್ರ

ನವಲಗುಂದ: ತಾಲ್ಲೂಕಿನ ಮೊರಬ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್.ಎಚ್.ಕೋನರಡ್ಡಿ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಶಿರಕೋಳ ಗ್ರಾಮದಲ್ಲಿ 15ನೇ ಹಣಕಾಸು ಯೋಜನೆಯಡಿ ₹5.50 ಲಕ್ಷ ವೆಚ್ಚದಲ್ಲಿ ಎಸ್.ಟಿ ಕಾಲೊನಿಯ ಸಿದ್ಧಾರೂಢ ಮಠದಿಂದ ಮೊರಬದ ರಸ್ತೆವರೆಗೆ ಸಿ.ಸಿ ರಸ್ತೆ ನಿರ್ಮಾಣ, ಜಾವೂರ ಗ್ರಾಮದಲ್ಲಿ ಜಾವೂರನಿಂದ ಹಂಚಿನಾಳದ ತಾಲ್ಲೂಕು ಹದ್ದಿನವರೆಗೆ ₹34.08 ಲಕ್ಷ ವೆಚ್ಚದಲ್ಲಿ ಮರುಡಾಂಬರೀಕರಣ, ಹನಸಿ ಗ್ರಾಮದಲ್ಲಿ ಹನಸಿಯಿಂದ ದಡೇರಕೊಪ್ಪ‌ದವರೆಗೆ 3.00 ಕಿ.ಮೀ ರಸ್ತೆಯನ್ನು ₹16.86 ಲಕ್ಷ ವೆಚ್ಚದಲ್ಲಿ ಮರುಡಾಂಬರೀಕರಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಮಾಜಿ ಶಾಸಕರಾದ ಬಿ.ಆರ್.ಯಾವಗಲ್, ಜಿಲ್ಲಾ ಪಂಚಾಯಿತಿ  ಮಾಜಿ ಅಧ್ಯಕ್ಷೆ ಶಾಂತವ್ವ ಗುಜ್ಜಳ, ಮಲ್ಲಿಕಾರ್ಜುನ ರೋಣದ, ಸಂತೋಷ ಗುಜ್ಜಳ, ಮಲ್ಲಪ್ಪ ಕುರಿ, ಈರಪ್ಪ ಮಾಳವಾಡ, ಮೌಲಾ ಮರ್ಥೋಜಿ, ಭೀಮ್ಶಿ ಜಕಾತಿ, ಸುರೇಶ ಕೇಸರಿ, ಪರಮೇಶ್ವರ್ ಹೊಸವಾಳ, ಶಿವಲೀಲಾ ಬೋರಶಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT