ಹುಬ್ಬಳ್ಳಿ–ಧಾರವಾಡ ಮದ್ಯ ಮಾರಾಟ ನಿಷೇಧ
ಮೊಹರಂ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಜುಲೈ 6ರಂದು ಬೆಳಿಗ್ಗೆ 6 ರಿಂದ ಜುಲೈ 7ರ ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದೆ. ಮದ್ಯದ ಅಂಗಡಿ, ಬಾರ್‌ಗಳನ್ನು ಮುಚ್ಚಬೇಕು. ಆದೇಶ ಮೀರಿ ನಡೆದುಕೊಂಡರೆ ಪರವಾನಗಿ ರದ್ದು ಪಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.