ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜಾಫರ್ ಶವ ತಂದೆಗೆ ಹಸ್ತಾಂತರ

Last Updated 9 ಏಪ್ರಿಲ್ 2022, 4:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾರಸುದಾರರು ಪತ್ತೆಯಾಗದ ಕಾರಣ ಏ. 5ರಂದು ಬಿಡನಾಳ ರುದ್ರಭೂಮಿಯಲ್ಲಿ ಹೂಳಲಾಗಿದ್ದ ವ್ಯಕ್ತಿಯೊಬ್ಬರ ಶವವನ್ನು ಶುಕ್ರವಾರ ಹೊರತೆಗೆದು, ಅಧಿಕಾರಿಗಳ ಸಮ್ಮುಖದಲ್ಲಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ನಗರದ ಪೆಂಡಾರಗಲ್ಲಿ ನಿವಾಸಿಯಾಗಿದ್ದ ಮುಜಾಫರ್ ಕಲಾದಗಿ (31) ಅವರು ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಾರ್ಥಿವ ಶರೀರ ಶವಾಗಾರದಲ್ಲಿ ಇಡಲಾಗದ ಸ್ಥಿತಿಯಲ್ಲಿ ಇದ್ದ ಕಾರಣ ಮಹಾನಗರ ಪಾಲಿಕೆ ಪೌರಕಾರ್ಮಿಕರು ಅಂತ್ಯಕ್ರಿಯೆ ನೆರವೇರಿಸಿದ್ದರು.

ಬೈಕ್ ಹಾಗೂ ಇತರೆ ವಸ್ತುಗಳನ್ನು ಮೃತನ ತಂದೆ ಅಬ್ದುಲ್ ಮುನಾಫ್ ಕಲಾದಗಿ ಗುರುತಿಸಿ ಶವ ತಮ್ಮ ಮಗನದ್ದೇ ಎಂದು ಖಚಿತಪಡಿಸಿದ್ದರು. ಶವವನ್ನು ಇಸ್ಲಾಂ ಸಂಪ್ರದಾಯದ ಪ್ರಕಾರ ಸಂಸ್ಕಾರ ಮಾಡಲು ಬಯಸಿ ಕುಟುಂಬಕ್ಕೆ ನೀಡುವಂತೆ ಮನವಿ ಮಾಡಿದ್ದರು. ಆದ್ದರಿಂದ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು ಎಂದು ಉಪವಿಭಾಗಾಧಿಕಾರಿ ಅಶೋಕ ತೇಲಿ ತಿಳಿಸಿದರು.

ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ, ಪೊಲೀಸರು ಹಾಗೂ ಧಾರ್ಮಿಕ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT