ಅಳ್ನಾವರದ ಮಧ್ಯೆ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಗೆದಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ
ಮಳೆಗಾಲ ಮನ್ಸೂಚನೆಯ ಪೂರ್ವ ಸಿದ್ದತೆ ಮಾಡಿಕೊಂಡು ರಸ್ತೆ ಅಭಿವೃದ್ಧಿ ಮಾಡಬೇಕು. ಮುಂದೆ ಆಗುವ ಅವಘಡ ತಪ್ಪಿಸಲು ತಕ್ಷಣವೆ ಕೆಲಸ ಆರಂಬಿಸಬೇಕು. ಈ ರಸ್ತೆಯಲ್ಲಿ ನಾನು ಪುಟ್ಟ ಟೀ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇನೆ. ರಸ್ತೆ ಸರಿ ಇಲ್ಲದಿರುವುದರಿಂದ ಗ್ರಾಹಕರು ಬರುತ್ತಿಲ್ಲ. ಇದರಿಂದ ವ್ಯಾಪಾರ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ.
ಶಿವಾಜಿ ಕಿತ್ತೂರ ವಿದ್ಯಾನಗರ ನಿವಾಸಿ ಹಾಗೂ ಟೀ ಅಂಗಡಿ ಮಾಲಿಕ
ಪ್ರತಿ ವರ್ಷ ಮಳೆಗಾಲದಲ್ಲಿ ಪದೇ ಪದೇ ಆಗುವ ಈ ತೊಂದರೆಗೆ ಶಾಶ್ವತ ಪರಿಹಾರ ನೀಡಲು ಕಾಂಕ್ರೀಟ್ ರಸ್ತೆ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಮಳೆ ನಿಂತ ನಂತರ ಕೆಲಸ ಆರಂಭವಾಗಲಿದೆ. ಸಾರ್ವಜನಿಕರ ಸಹಕರಿಸಬೇಕು
ಶ್ರೀಕಾಂತ ಗಾಯಕವಾಡ ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ
ಪರ್ಯಾಯ ರಸ್ತೆ ಇಲ್ಲದಿರುವುದರಿಂದ ಟ್ರಾಫಿಕ್ ಬೇರೆಡೆ ತಿರುಗಿಸಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತ ತಕ್ಷಣ ಕಾಮಗಾರಿ ಆರಂಭವಾಗಲಿದೆ. 7 ಮೀಟರ್ ಕಾಂಕ್ರೀಟ್ ಹಾಗೂ ಮೂರು ಮೀಟರ್ ಫೇವರ್ಸ್ ಸೇರಿ ಒಟ್ಟು 10 ಮೀಟರ್ ಅಗಲ ಹಾಗೂ 630 ಮೀಟರ್ ಉದ್ದದ ರಸ್ತೆಯನ್ನು ₹2.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಉತ್ತಮ