ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಂಕ್ಷಾಗೆ ನಾಟ್ಯ ಮಯೂರಿ ಪ್ರಶಸ್ತಿ

Published 14 ಮಾರ್ಚ್ 2024, 14:50 IST
Last Updated 14 ಮಾರ್ಚ್ 2024, 14:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಉಣಕಲ್‌ ಗ್ರಾಮದ ಬಾಲಕಿ ಆಕಾಂಕ್ಷಾ ಮಾಲತೇಶ ಗೌಡ ಪಾಟೀಲ, ’ಕರ್ನಾಟಕ ನಾಟ್ಯ ಮಯೂರಿ–2024’ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. 

ಬೆಳಗಾವಿಯಲ್ಲಿ ಈಚೆಗೆ ನಡೆದ ‘ರಾಷ್ಟ್ರೀಯ ನೃತ್ಯೋತ್ಸವ’ದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಾಳೆ. ನಗರದ ರಾಯಾಪುರದ ಕೆಎಲ್‌ಇ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿಯಾದ ಆಕಾಂಕ್ಷಾಳಿಗೆ ತಂದೆ ಮಾಲತೇಶ ಪಾಟೀಲ, ತಾಯಿ ಸುಜಾತಾ ಪಾಟೀಲ, ನೃತ್ಯ ಗುರು ನವನಗರದ ಶಾಂತಲಾ ನೃತ್ಯಾಲಯದ ವಿಜೇತಾ ವರ್ಣೇಕರ ಮಾರ್ಗದರ್ಶನ ನೀಡಿದ್ದಾರೆ. 

ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ ಹಾಗೂ ಉಣಕಲ್ ಗ್ರಾಮದ ಗಣ್ಯರು, ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT