ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಟ್ರೋಲ್, ಡಿಸೇಲ್ ದರ ಏರಿಕೆ ತಡೆಗೆ ರಾಜ್ಯಪಾಲರಿಗೆ ಪಿ.ಎಚ್. ನೀರಲಕೇರಿ ಮನವಿ

ಬಿಜೆಪಿ ಮುಖಂಡ ಪಿ.ಎಚ್.ನೀರಲಕೇರಿ ಅವರು ರಾಜಭವನದಲ್ಲಿ ರಾಜ್ಯಪಾಲ ಥಾವರಚೆಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿದರು.
Published 17 ಜೂನ್ 2024, 13:05 IST
Last Updated 17 ಜೂನ್ 2024, 13:05 IST
ಅಕ್ಷರ ಗಾತ್ರ

ಧಾರವಾಡ: 'ರಾಜ್ಯ ಸರ್ಕಾರದ ಏಕಾಏಕಿ ಪೆಟ್ರೋಲ್, ಡಿಸೇಲ್ ದರ ಏರಿಕೆ ನಿರ್ಧಾರವನ್ನು ತಡೆಹಿಡಿಯುವಂತೆ ಆದೇಶ ನೀಡಬೇಕು’ ಎಂದು ಬಿಜೆಪಿ ಮುಖಂಡ ಪಿ.ಎಚ್.ನೀರಲಕೇರಿ ಅವರು ಭಾನುವಾರ ರಾಜಭವನದಲ್ಲಿ ರಾಜ್ಯಪಾಲ ಥಾವರಚೆಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಪೆಟ್ರೋಲ್ ₹3 ಹಾಗೂ ಡಿಸೇಲ್ ಬೆಲೆಯಲ್ಲಿ ₹3.50 ದರ ಹೆಚ್ಚಳ ಮಾಡಿದೆ. ಈ ಬೆಲೆ ಏರಿಕೆಯು ಸಾರ್ವಜನಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸಹಜವಾಗಿಯೇ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ವಿಪರೀತ ಹೆಚ್ಚಳವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಕಚ್ಚಾ ತೈಲದ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ರಾಜ್ಯ ಸರ್ಕಾರ ಹೇಳಿದಂತೆ ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ. ಕರ್ನಾಟಕ ದಿವಾಳಿ ಸಹ ಆಗಿಲ್ಲ. ಆದಾಗ್ಯೂ ದಿಢೀರ್ ತೈಲಗಳ ಬೆಲೆ ಏರಿಕೆ ಯಾವು ಪುರುಷಾರ್ಥಕ್ಕೆ’ ಎಂದು ಪ್ರಶ್ನಿಸಿದ್ದಾರೆ.

‘ಗ್ಯಾರಂಟಿಗಳಿಂದ ಬರಿದಾದ ರಾಜ್ಯದ ಖಜಾನೆ ತುಂಬಿಸಲು, ಕೈ ಸರ್ಕಾರವು ತೈಲಗಳ ಬೆಲೆ ಏರಿಸಿ ಬಡವರ ಜೇಬಿಗೆ ಕತ್ತರಿ ಹಾಕಿದೆ. ಸರ್ಕಾರ ಬೆಲೆ ಏರಿಕೆ ನಿರ್ಧಾರ ಹಿಂಪಡೆಯುವಂತೆ ಸರ್ಕಾರಕ್ಕೆ ಆದೇಶಿಸಬೇಕು’ ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT