ಹುಬ್ಬಳ್ಳಿ: ಇಲ್ಲಿಯ ವಸುಂಧರಾ ಫೌಂಡೇಷನ್ ಮತ್ತು ಅಕ್ಷಯ ಕಾಲೊನಿ 4ನೇ ಹಂತದ ನಿವಾಸಿಗಳ ಸಂಘದ ವತಿಯಿಂದ ಭಾನುವಾರ ಕಾಲೊನಿಯ ವೃಂದಾವನ ಉದ್ಯಾನದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಮಳೆಗಾಲ ಬಂದಾಗಷ್ಟೇ ನಾವು ಪರಿಸರ ಎನ್ನಬಾರದು. ವರ್ಷಪೂರ್ತಿ ಪರಸರ ಪ್ರಜ್ಞೆಯಿಂದ, ನೆಟ್ಟ ಗಿಡಗಳ ಪೋಷಣೆ ಮಾಡುತ್ತ ಇರಬೇಕು. ಪರಿಸರ ಉಳಿದರೆ ಮಾತ್ರ ನಾವು ಎನ್ನುವ ಸೂಕ್ಷ್ಮ ಅರಿತುಕೊಳ್ಳಬೇಕು. ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ದತ್ತು ಪಡೆದು, ರಕ್ಷಣೆ ಮಾಡುವ ನಿರ್ಧಾರ ಸಂಘ ತೆಗೆದುಕೊಳ್ಳಲಿ’ ಎಂದರು.

ಪಾಲಿಕೆ ಸದಸ್ಯೆ ವೀಣಾ ಬರದ್ವಾಡ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಹೇಮಂತ ಬೆಲ್ಲದ, ಮೇಘರಾಜ ಕೆರೂರ, ವಿವೇಕ ಮೋಕಾಶಿ, ಪಾಲಂಕರ, ಡಾ. ಗಣೇಶ ವೆರ್ಣೇಕರ, ದತ್ತ ಕುಲಕರ್ಣಿ, ವಸಂತ ರೊಟ್ಟಿ, ಡಾ. ನಿಡಗುಂದಿ, ಎಸ್.ಎಸ್. ಶೆಟ್ಟರ್ ಹಾಗೂ ನಿವಾಸಿಗಳು ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ಬಗೆಯ ಗಿಡಗಳನ್ನು ನೆಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.