ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ನೀಡದಿದ್ದರೆ ಆತ್ಮಹತ್ಯೆಯೇ ದಾರಿ ಎಂದ ಚಾಲಕರು

ಓಲಾ ನಗರ ಸಾರಿಗೆ ಸೇವೆ ನಿರ್ಬಂಧ
Last Updated 2 ಜುಲೈ 2018, 9:24 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಓಲಾ ಕ್ಯಾಬ್‌ ನಗರ ಸೇವೆಗೆ ನಿರ್ಬಂಧ ವಿಧಿಸಿರುವ ಜಿಲ್ಲಾಧಿಕಾರಿ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಚಾಲಕರು, ಈ ಕೂಡಲೇ ಅದನ್ನು ಹಿಂಪಡೆಯದಿದ್ದರೆ ಉಳಿಯುವ ದಾರಿ ಆತ್ಮಹತ್ಯೆ ಒಂದೇ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಶುಕ್ರವರ ನಡೆದಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಡಿದ್ದ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಓಲಾ ಹಾಗೂ ಊಬರ್ ಕ್ಯಾಬ್‌ಗಳು ಒಂದು ವಾರದಲ್ಲಿ ಲಾಂಭನ ತೆರವುಗೊಳಿಸಬೇಕು. ಒಪ್ಪಂದದ ಮೇರೆಗೆ ಮಾತ್ರ ಹೊರಗಿನ ಸ್ಥಳಗಳಿಗೆ ಸಂಚರಿಸಬಹುದು ಎಂದು ಹೇಳಿದ್ದರು. ಈ ಬಗ್ಗೆ ನಗರದಲ್ಲಿ ತುರ್ತು ಸಭೆ ನಡೆಸಿದ ಕ್ಯಾಬ್ ಚಾಲಕರು, ಮಾಲೀಕರು ತೀವ್ರ ಆತಂಕ ವ್ಯಕ್ತಪಡಿಸಿದರು. ಕಳೆದ ನಾಲ್ಕು ವರ್ಷಗಳಿಂದ ಕ್ಯಾಬ್ ಸೇವೆ ನೀಡುತ್ತಿದ್ದೇವೆ. ಆದರೆ ಈಗ ದಿಢೀರ್ ಎಂದು ನಿರ್ಬಂಧ ವಿಧಿಸಿರುವುದು ಆಘಾತ ಉಂಟು ಮಾಡಿದೆ ಎಂದರು.

ಹುಬ್ಬಳ್ಳಿ– ಧಾರವಾಡ ಅವಳಿನಗರದಲ್ಲಿ 2014 ಡಿಸೆಂಬರ್ 25ರಂದು ಓಲಾ ಓಡಾಟ ಆರಂಭವಾಯಿತು. ಗ್ರಾಹಕರಿಗೆ ಒಳ್ಳೆಯ ಸೇವೆ ನೀಡಿದ ಕಾರಣ ಕಡಿಮೆ ಅವಧಿಯಲ್ಲಿ ಜನಪ್ರಿಯವಾಯಿತು. ಸ್ಥಳೀಯ ಚಾಲಕರಿಗೂ ಇದು ಹೊಟ್ಟೆಪಾಡಿನ ಮಾರ್ಗವಾಯಿತು. ಪ್ರಸ್ತುತ 230 ಮಂದಿ ಚಾಲಕರು– ಮಾಲೀಕರು ಓಲಾ ನಂಬಿ ಜೀವನ ನಡೆಸುತ್ತಿದ್ದಾರೆ. ಕೇವಲ ನಗರದ ಹೊರ ಭಾಗಗಳಿಗೆ ಮಾತ್ರ ಸೇವೆ ನೀಡಬೇಕು ಎಂದರೆ ಕಾಯ್ದಿರಿಸುವಿಕೆ ಪ್ರಮಾಣ ತೀರಾ ಕಡಿಮೆಯಾಗಲಿದೆ. ದಿನಕ್ಕೆ ಹತ್ತು– ಹದಿನೈದು ಬಾಡಿಗೆ ಸಿಗುವುದು ಸಹ ಅನುಮಾನ ಎಂದು ಚಾಲಕ ಶಿವು ಅಪ್ಪಾಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಓಲಾವನ್ನೇ ನಂಬಿಕೊಂಡು ಎಂಟರಿಂದ ಹತ್ತು ಲಕ್ಷ ಬ್ಯಾಂಕ್ ಸಾಲ ಮಾಡಿ ವಾಹನ ಖರೀದಿಸಲಾಗಿದೆ. ಕೆಲವರು ಆಸ್ತಿ ಹಾಗೂ ಚಿನ್ನಾಭರಣವನ್ನು ಬ್ಯಾಂಕ್‌ಗೆ ಭದ್ರತೆಯಾಗಿ ನೀಡಿದ್ದಾರೆ. ಬಾಡಿಗೆಯೇ ಇಲ್ಲದಿದ್ದರೆ ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ. ಬ್ಯಾಂಕಿಗೆ ಭದ್ರತೆಯಾಗಿ ನೀಡಿರುವ ಆಸ್ತಿ ಹಾಗೂ ಆಭರಣ ಕಳೆದುಕೊಳ್ಳಬೇಕಾಗುತ್ತದೆ. ಸುಮಾರು ನಾನೂರು ಕುಟುಂಬಗಳು ಬೀದಿಗೆ ಬರಲಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT