ಧಾರವಾಡ: ನಗರದ ಕಾಯಂ ಜನತಾ ನ್ಯಾಯಾಲಯದಲ್ಲಿ 2024 ಮೇ ನಿಂದ 2025ಜುಲೈವರೆಗೆ 726 ಪ್ರಕರಣ ಇತ್ಯರ್ಥಪಡಿಸಲಾಗಿದೆ, 479 ಪ್ರಕರಣ ಬಾಕಿ ಇವೆ ಎಂದು ಕಾಯಂ ಜನತಾ ನ್ಯಾಯಾಲಯ ಧಾರವಾಡ ವಿಭಾಗದ ಅಧ್ಯಕ್ಷ ನಾಗರಾಜಪ್ಪ ಕುರಡಕರ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಯಂ ಜನತಾ ನ್ಯಾಯಾಲಯದ ವಿಶೇಷ ಅಭಿಯಾನ (ಜುಲೈ 26 ರಿಂದ ಆ.26ರವರೆಗೆ) ನಡೆಯುತ್ತಿದೆ. ಅಭಿಯಾನದಡಿ ಪ್ರತಿ ತಾಲ್ಲೂಕಿನಲ್ಲಿ ಐದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾಯಂ ಜನತಾ ನ್ಯಾಯಾಲಯದ ಕುರಿತು ಮಾಹಿತಿ ನೀಡಲಾಗುತ್ತಿದೆ. ಧಾರವಾಡ ವಿಭಾಗ ವ್ಯಾಪ್ತಿಗೆ ಧಾರವಾಡ, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಒಳಪಡುತ್ತವೆ ಎಂದರು.

ಕಾಯಂ ಜನತಾ ನ್ಯಾಯಾಲಯದಲ್ಲಿ ಸಾರ್ವಜನಿಕ ಉಪಯುಕ್ತತಾ ಸೇವೆ ಪ್ರಕರಣ ದಾಖಲಿಸಬಹುದು. ಸಾರಿಗೆ, ಅಂಚೆ, ದೂರವಾಣಿ, ವಿದ್ಯುತ್, ನೀರು ಪೂರೈಕೆ, ವಿಮೆ, ಆಸ್ಪತ್ರೆ, ಹಣಕಾಸು ಸಂಸ್ಥೆ, ಶಿಕ್ಷಣ ಸಂಸ್ಥೆ, ಗೃಹ, ರಿಯಲ್ ಎಸ್ಟೇಟ್, ಎಲ್ಪಿಜಿ ಹೊಸ ಸಂಪರ್ಕ ಮತ್ತು ಮರುಪೂರಣ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳುನ್ನು ದಾಖಲಿಸಬಹುದು ಎಂದರು.

‘ಪ್ರಕರಣ ದಾಖಲಿಸಲು ಶುಲ್ಕ ಇಲ್ಲ. ಬೇರೆ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇಲ್ಲಿ ದಾಖಲಿಸಲು ಅವಕಾಶ ಇಲ್ಲ. ₹ 1 ಕೋಟಿ ಮೌಲ್ಯದವರೆಗಿನ ವ್ಯಾಜ್ಯ ಅಥವಾ ಹಣಕಾಸಿನ ಪ್ರಕರಣ ದಾಖಲಿಸಬಹುದು. ಕಾಯಂ ಜನತಾ ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣವನ್ನು ಯಾವುದೇ ಸಿವಿಲ್ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇಲ್ಲ. ಆದರೆ, ಹೈಕೋರ್ಟ್ನಲ್ಲಿ ‘ರಿಟ್’ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ತಿಳಿಸಿದರು.

ಸೆ.9ರಂದು ಲೋಕ ಅದಾಲತ್ ಜಿಲ್ಲೆಯ ಎಲ್ಲ ಕೋರ್ಟ್ಗಳಲ್ಲಿ ಸೆ.9ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್.ದೊಡ್ಡಮನಿ ತಿಳಿಸಿದರು. 'ಚೆಕ್' ಅಮಾನ್ಯ ಮೋಟಾರು ವಾಹನ ಅಪಘಾತ ಸಾಲ ವಸೂಲಿ ವ್ಯಾಜ್ಯ ಪೂರ್ವ ದಾವೆ ಮೊದಲಾದ ಪ್ರಕರಣಗಳನ್ನು ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಇದೆ ಎಂದರು. ಮಾಹಿತಿಗಾಗಿ ದೂ: 0836 2740128 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.