ಸೋಮವಾರ, ಜನವರಿ 25, 2021
27 °C

ನಿಗಮ ಸ್ಥಾಪಿಸಲು ಪಿಂಜಾರ ಸಂಘದ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನಮ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದಿದ್ದು, ಈ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ನಮಗೂ ನಿಗಮ ಮಂಡಳಿ ಸ್ಥಾಪಿಸಬೇಕು’ ಎಂದು ಕರ್ನಾಟಕ ರಾಜ್ಯ ನದಾಫ್‌, ಪಿಂಜಾರ ಸಂಘದ ಹುಬ್ಬಳ್ಳಿ ತಾಲ್ಲೂಕು ಶಹರ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.

ನಗರದ ಮಿನಿವಿಧಾನ ಸೌಧದ ಮುಂದೆ ಬುಧವಾರ ಘೋಷಣೆಗಳನ್ನು ಕೂಗಿದ ಪದಾಧಿಕಾರಿಗಳು ‘ಕೇಂದ್ರ ಸರ್ಕಾರ ನದಾಫ್‌, ಪಿಂಜಾರ ಜನಾಂಗವನ್ನು ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು, ರಾಜ್ಯದಲ್ಲಿ ನಮ್ಮ ಜನಾಂಗವನ್ನು ಅತ್ಯಂತ ಹಿಂದುಳಿದ ಪಟ್ಟಿಯಲ್ಲಿ ಗುರುತಿಸಲಾಗಿದೆ. ಗಾದಿ ತಯಾರಿಸುವುದು, ಹಗ್ಗ–ಕಣ್ಣಿಗಳ ತಯಾರಿಕೆಯ ಮೇಲೆ ನಮ್ಮ ಸಮಾಜದ ಜನರ ಜೀವನ ಅಲವಂಬಿತವಾಗಿದೆ. ಆದ್ದರಿಂದ ಸಮಾಜದ ಜೀವನ ಗುಣಮಟ್ಟಕ್ಕೆ ನಿಗಮ ಅಗತ್ಯವಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ನಿಗಮ ರಚನೆ ಮಾಡಬೇಕು ಎಂದು ಅನೇಕ ವರ್ಷಗಳಿಂದ ಬೇಡಿಕೆ ಮಂಡಿಸುತ್ತಾ ಬಂದಿದ್ದೇವೆ. ಪ್ರತಿ ವರ್ಷ ಇದಕ್ಕಾಗಿ ಮನವಿ ಪತ್ರಗಳನ್ನು ಸಲ್ಲಿಸಿ ಹೋರಾಟಗಳನ್ನೂ ಮಾಡಿದ್ದೇವೆ. ಆದರೂ ಬೇಡಿಕೆ ಈಡೇರಿಲ್ಲ. ಈ ಸಲವಾದರೂ ಪರಿಗಣನೆಗೆ ತೆಗೆದುಕೊಳ್ಳಬೇಕು, ನಿಗಮ ಸ್ಥಾಪಿಸಬೇಕು ಎಂದು ಕೋರಿದ್ದಾರೆ.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಶಮಶುದ್ದೀನ್‌, ಕಾರ್ಯದರ್ಶಿ ದಾವಲಸಾಬ ಎಚ್‌. ನದಾಫ್‌, ಎಚ್‌.ಎಂ. ದೊಡ್ಡಮನಿ, ಎನ್‌.ಎಸ್‌. ನದಾಫ್‌, ಡಿ.ಎಚ್‌. ನದಾಫ್‌, ಎಂ.ಎ. ನದಾಫ್‌, ಬಿ.ಆರ್‌. ಪಿಂಜಾರ, ಎಸ್‌.ಬಿ. ಹುಬ್ಬಳ್ಳಿ, ಎಚ್‌.ಎ. ಕಂಚಗಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು