ಧಾರವಾಡ: ‘ಪ್ರಜಾವಾಣಿ’ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವರಭಾಸ್ಕರ ಪಂಡಿತ್ ಭೀಮಸೇನ ಜೋಶಿ ಅವರ ಪುಣ್ಯತಿಥಿ ಅಂಗವಾಗಿ ಆಯೋಜಿಸಿರುವ 'ಸ್ವರ ಗಂಧರ್ವ' ಕಾರ್ಯಕ್ರಮದಲ್ಲಿ ವಿದುಷಿ ಸಾವನಿ ಶೇಂಡೆ ಗಾಯನ ಜನಮನ ಸೂರೆಗೊಂಡಿತು.
ನಗರದ ಸೃಜನಾ ರಂಗಮಂದಿರದಲ್ಲಿ ಭಾರತೀಯ ಸಂಗೀತ ವಿದ್ಯಾಲಯವು 'ಪ್ರಜಾವಾಣಿ' ಹುಬ್ಬಳ್ಳಿಯ ಬಿಡಿಕೆ ಸ್ಟೀಮ್ಸ್ ಲಿಮಿಟೆಡ್, ಸ್ವರ್ಣಾ ಗ್ರೂಪ್, ಎಂ.ಎಂ. ಜೋಶಿ ನೇತ್ರ ಸಂಸ್ಥೆ, ಪ್ರಶಾಂತ ನರ್ಸಿಂಗ್ ಹೋಂ, ಕೆವಿಜಿ ಬ್ಯಾಂಕ್ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ.

ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆ ತನಕ ನಡೆಯಲಿರುವ ಈ ಸಂಗೀತ ಕಾರ್ಯಕ್ರಮವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಉದ್ಘಾಟಿಸಿದರು.

ಬಳಿಕ ವಿದುಷಿ ಸಾವನಿ ಶೇಂಡೆ ಅವರು ನಟ್ ಭೈರವ ರಾಗದೊಂದಿಗೆ ಕಛೇರಿ ಆರಂಭಿಸಿದರು. ಅವರು ಪ್ರಸ್ತುತ ಪಡಿಸಿದ ' ರೇ ಮನ್ ತು ಕಾಯೆ ಕರೆತ್ ಗುಮಾನ' ಸಭಿಕರು ತಲೆದೂಗುವಂತೆ ಮಾಡಿ, ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು.
ಬಳಿಕ ಅವರು ಎರಡು ಛೋಟಿ ಬಂದೀಶ್ ಗಳನ್ನು ಪ್ರಸ್ತುರಪಡಿಸಿದರು.

ತಬಲಾದಲ್ಲಿ ಸ್ಥಳೀಯ ಪ್ರತಿಭೆ ಶ್ರೀಧರ ಮಾಂಡ್ರೆ ಸಾಥ್ ನೀಡಿದರೆ, ಹಾರ್ಮೋನಿಯಂನಲ್ಲಿ ಸತೀಸ ಕೊಳ್ಳಿ ವಾದನ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.