ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ರ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್ ಶಿಪ್' ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ನ ಸೃಜನ್ ಹಾಗೂ ತಕ್ಷಕ್ ಶೆಟ್ಟಿ (111 ಅಂಕ) ಜಯ ಗಳಿಸಿದರು. ಅವರಿಗೆ ₹ 5 ಸಾವಿರ ನಗದು ಬಹುಮಾನ ನೀಡಲಾಯಿತು.

ಅದೇ ಶಾಲೆಯ ಸ್ಕಂದ ಜೆ. ಶೆಟ್ಟಿ ಹಾಗೂ ಓಜಸ್ ದಿನೇಶ್ (40 ಅಂಕ) ಮೊದಲ ರನ್ನರ್ ಅಪ್ (₹3 ಸಾವಿರ ನಗದು ಬಹುಮಾನ), ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯದ ಕೌಸ್ತುಬ್ ಕುಲಕರ್ಣಿ ಹಾಗೂ ಸಾಕ್ಷಿ ಕುಲಕರ್ಣಿ (30 ಅಂಕ) ಎರಡನೇ ರನ್ನರ್ ಅಪ್ (₹2 ಸಾವಿರ) ಸ್ಥಾನ ಗಳಿಸಿದರು.

ಧಾರವಾಡದ ಸರ್ಕಾರಿ ಆದರ್ಶ ವಿದ್ಯಾಲಯದ ಸಮರ್ಥ್ ಪತ್ತಾರ್ ಹಾಗೂ ಶ್ರೀಧರ ಸೂರ್ಯವಂಶಿ, ಉತ್ತರ ಕನ್ನಡ ಜಿಲ್ಲೆ ಕುಮಟಾದ ಸಿವಿಎಸ್ ಕೆ ಪ್ರೌಢಶಾಲೆಯ ಅಮೋಘ ಕುಲಕರ್ಣಿ ಹಾಗೂ ನಿತೇಶ ಪಟಗಾರ, ಉತ್ತರ ಕನ್ನಡದ ಪಿಎಂಶ್ರೀ ಶಾಲೆಯ ಮನೋಜ್ ಎಂ.ಎಸ್. ಹಾಗೂ ತೇಜಸ್ ಜಿ.ಜಿ. ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ವಿಜೇತರಿಗೆ ಹುಬ್ಬಳ್ಳಿಯ ನಗರ ತಹಶೀಲ್ದಾರ್ ಮಹೇಶ ಗಸ್ತೆ ಬಹುಮಾನ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ರಸಪ್ರಶ್ನೆ ಕಾರ್ಯಕ್ರಮದ ಮೂಲ ಮಕ್ಕಳಲ್ಲಿ ಅಡಗಿರುವ ಜ್ಞಾನ ಹೊರಗೆ ತರಬಹುದು. ಸಮಯ ಪ್ರಜ್ಞೆ, ಏಕಾಗ್ರತೆ ಬೆಳೆಸಬಹುದು. ಜ್ಞಾನ ಹೆಚ್ಚಿಸುವ ರಸಪ್ರಶ್ನೆ ಸ್ಪರ್ಧೆಗಳು ಹೆಚ್ಚು ಆಯೋಜನೆಯಾಗಲಿ ಎಂದು ಆಶಿಸಿದರು. ಪ್ರಜಾವಾಣಿಗೆ ಧನ್ಯವಾದ ಅರ್ಪಿಸಿದರು.
.ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್ಶಿಪ್ ಸ್ಪರ್ಧೆ: 2ನೇ ಹಂತಕ್ಕೆ ಆರು ತಂಡ ಆಯ್ಕೆ.ಹುಬ್ಬಳ್ಳಿ:ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್ಶಿಪ್ ಸ್ಪರ್ಧೆಗೆ ವಿಧ್ಯುಕ್ತ ಚಾಲನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.