ಹುಬ್ಬಳ್ಳಿ: ಹಿಂದೂ ಸಮಾಜದವರು ದೇಶ ರಕ್ಷಣೆಗಾಗಿ ಹೆಚ್ಚು ಮಕ್ಕಳನ್ನು ಹೆರಬೇಕು. ನಿಮಗೆ ಮಕ್ಕಳ ಪೋಷಣೆ ಸಾಧ್ಯವಾಗದಿದ್ದರೆ ಶ್ರೀರಾಮಸೇನೆಯಿಂದ ಅವರನ್ನು ಪೋಷಣೆ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ತ್ರಿಶೂಲ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆಯಿಂದ ನೀಡಿದ ತ್ರಿಶೂಲವನ್ನು ಮಹಿಳೆಯರು ಬ್ಯಾಗಿನಲ್ಲಿ ಇಟ್ಟುಕೊಳ್ಳಿ. ತೊಂದರೆ ಕೊಟ್ಟವರಿಗೆ ಅದರಿಂದ ಚುಚ್ಚಿ. ಪೊಲೀಸರು, ಸರ್ಕಾರವು ಮಹಿಳೆಯರ ರಕ್ಷಣೆ ಮಾಡುತ್ತಿಲ್ಲ. ಹೀಗಾಗಿ, ಇದು ಅನಿವಾರ್ಯ. ನಾವೇ ರಕ್ಷಣೆ ಮಾಡಿಕೊಳ್ಳಬೇಕು. ಮನೆಯಲ್ಲಿ ಆಯುಧಗಳನ್ನು ಇಟ್ಟು ಪೂಜಿಸಿ. ಇದರಿಂದ ಸ್ಫೂರ್ತಿ ಬರುತ್ತೆ. ಪೊಲೀಸರು ಕೇಳುತ್ತಾರೆಂಬ ಭಯ ಬೇಡ. ಅವರೂ, ಆಯುಧಪೂಜೆಯಂದು ಬಂದೂಕಿಗೆ ಪೂಜೆ ಮಾಡುತ್ತಾರೆ ಎಂದರು.

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಅಥವಾ ಎನ್ಕೌಂಟರ್ ಮಾಡಿರಷ್ಟೇ ಅವಳಿಗೆ ನ್ಯಾಯ ಸಿಗುತ್ತೆ. ಹತ್ಯೆ ಮಾಡಿದವರಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಟ್ಟರೆ, ನಾವೇ ಅವನನ್ನು ಕಲ್ಲು ಹೊಡೆದು ಕೊಲ್ಲುವೆವು. ನ್ಯಾಯಾಧೀಶರ ಮನೆಯ ಹೆಣ್ಣುಮಗಳಿಗೆ ಲವ್ ಜಿಹಾದ್ ಹೆಸರಲ್ಲಿ ಅನ್ಯಾಯ ಮಾಡಿದರೆ, ಅದರ ನೋವೇನೆಂದು ಗೊತ್ತಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.