ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಡ್ತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಒತ್ತಾಯ

Published : 9 ಆಗಸ್ಟ್ 2024, 15:56 IST
Last Updated : 9 ಆಗಸ್ಟ್ 2024, 15:56 IST
ಫಾಲೋ ಮಾಡಿ
Comments

ಧಾರವಾಡ: ‘ರಾಜ್ಯ ಸರ್ಕಾರವು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡದೆ ಅನ್ಯಾಯ ಮಾಡುತ್ತಿದೆ’ ಎಂದು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸಂಗಮೇಶ ಖನ್ನಿನಾಯ್ಕರ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇರೆ ಇಲಾಖೆ ನೌಕರರಿಗೆ ಸೇವಾನುಭವ ಆಧರಿಸಿ ಬಡ್ತಿ ನೀಡಲಾಗುತ್ತಿದೆ. ಆದರೆ, 20ರಿಂದ 30 ವರ್ಷ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಬಡ್ತಿ ನೀಡುತ್ತಿಲ್ಲ. ವಿದ್ಯಾರ್ಹತೆ ಹಾಗೂ ಸೇವಾವಧಿ ಆಧರಿಸಿ ಶಿಕ್ಷಕರಿಗೆ ಬಡ್ತಿ ನೀಡಬೇಕು. ಗ್ರಾಮೀಣ- ನಗರ ಶಿಕ್ಷಕರ ವರ್ಗಾವಣೆಗೆ ರೋಸ್ಟರ್‌ ಪಾಲಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು. 

ಪರಿಷತ್ತಿನ ಗೌರವಾಧ್ಯಕ್ಷ ಗುರು ತಿಗಡಿ ಮಾತನಾಡಿ, ‘ಸರ್ಕಾರವು ಪ್ರಾಥಮಿಕ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. 2017ರ ಸಿ ಆ್ಯಂಡ್ ಆರ್ ನಿಯಮಾವಳಿ ಬದಲಾವಣೆ ಮಾಡಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು. ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆಗೆ ಕಲಿಕಾ ಸಾಮಗ್ರಿ ಉಚಿತವಾಗಿ ವಿತರಿಸಬೇಕು. ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಪದವೀಧರ ಪಿ.ಎಸ್.ಟಿ ರದ್ದುಪಡಿಸಿ ಜಿ.ಪಿ.ಟಿ.ಜಾರಿಗೊಳಿಸಬೇಕು. ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ನೀಡಬೇಕು. ವಿದ್ಯಾರ್ಥಿ ವೇತನ ದುಪ್ಪಟ್ಟು ಮಾಡಬೇಕು’ ಎಂದು ಒತ್ತಾಯಿಸಿದರು.

‘ಈಚೆಗೆ ನಡೆದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯಾಧ್ಯಕ್ಷರಾಗಿ ಸಂಗಮೇಶ ಖನ್ನಿನಾಯ್ಕರ, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಎಸ್.ಹಿರೇಗೌಡರ, ಕಾರ್ಯಾಧ್ಯಕ್ಷರಾಗಿ ರಾಮಪ್ಪ ಹಂಡಿ, ಉಪಾಧ್ಯಕ್ಷರಾಗಿ ವಿಜಯಕುಮಾರ ಅವರನ್ನು ಅವಿರೋಧ ಆಯ್ಕೆಯಾಗಿದ್ದಾರೆ’ ಎಂದು ಗುರು ತಿಗಡಿ ತಿಳಿಸಿದರು.

ಶಿಕ್ಷಕರಾದ ರಾಮಪ್ಪ ಹಂಡಿ, ಆರ್.ಎಸ್.ಹಿರೇಗೌಡರ, ಮಹಾದೇವಿ ದೊಡ್ಡಮನಿ, ಗುರು ಪೋಳ, ಗಂಗವ್ವ ಕೋಟಿಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT