ಹುಬ್ಬಳ್ಳಿ: ‘ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿದರೆ ಸರ್ಕಾರಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪಲು ಸಾಧ್ಯ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಹಳೇ ಹುಬ್ಬಳಿಯ ವಾರ್ಡ್ ಸಂಖ್ಯೆ 72ರ ಕಟಗರ ಓಣಿ ಹಾಗೂ ಕರ್ಜಗಿ ಓಣಿಯಲ್ಲಿ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಒಳರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ. ಅದರಲ್ಲೂ ಸಿ.ಸಿ. ರಸ್ತೆ, ಒಳಚರಂಡಿ, ಪೈಪ್ಲೈನ್ ಕಾಮಗಾರಿ ಕೈಗೊಳ್ಳುವ ಮುನ್ನ ಪೂರ್ವಸಿದ್ಧತೆ, ಸಮನ್ವಯ ಅತ್ಯಗತ್ಯ’ ಎಂದು ಹೇಳಿದರು.

‘24/7 ನೀರು ಸರಬರಾಜು ಯೋಜನೆಗಾಗಿ ರಸ್ತೆಗಳನ್ನು ಎಲೆಂದರಲ್ಲಿ ಅಗೆದು ಕ್ಷೇತ್ರದಲ್ಲಿ ರಸ್ತೆಗಳ ಗುಣಮಟ್ಟ ಕೆಟ್ಟಿದೆ. ಈ ರೀತಿ ಮುಂದುವರಿದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

‘ಒಳಚರಂಡಿ ಕಾಮಗಾರಿಗೆ ₹40 ಕೋಟಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ₹100 ಕೋಟಿ ಅನುದಾನ ಶೀಘ್ರ ಮಂಜೂರು ಆಗಲಿದೆ’ ಎಂದರು.

ಮಹಾನಗರ ಪಾಲಿಕೆ ಸದಸ್ಯ ಲೋಕೇಕ್ ಗುಂಜಾಳ, ಆರೀಫ್ ದೊಡ್ಡಮನಿ, ಮುಖಂಡರಾದ ಖಾದರಅಲಿ ಜಮಾದಾರ, ಬಾಬಾ ಧಾರವಾಡ, ಸೈಯ್ಯದಅಲಿ ಮುಲ್ಲಾ, ಮುಸ್ತಾಕ ಅತ್ತಾರ, ಅಧಿಕಾರಿಗಳಾದ ಬ್ರಹ್ಮಲಿಂಗೇಶ್ವರ, ಹುಳಿಗಾಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.