ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂತ ರೈತ ಸಮ್ಮೇಳನ ನಾಳೆಯಿಂದ

Last Updated 2 ಜನವರಿ 2022, 3:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಸಂಘಟನೆಯ ಕರ್ನಾಟಕ ಉತ್ತರ ಪ್ರಾಂತದ ವತಿಯಿಂದ ಗೋಕುಲ‌ ರಸ್ತೆಯ ಹೆಬಸೂರ ಭವನದಲ್ಲಿ ಜ.‌3 ಮತ್ತು 4ರಂದು ಪ್ರಾಂತ ರೈತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಿಸಾನ್ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವಿವೇಕ ಮೋರೆ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ರಂದು ಬೆಳಿಗ್ಗೆ 10.30ಕ್ಕೆ ಕೊಪ್ಪಳದ ಗೋ ಸಂರಕ್ಷಕ ಭರಮಣ್ಣ ಗುರಿಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಗದುಗಿನ ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಬಗಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕಿಸಾನ್ ಸಂಘದ ಐ.ಎನ್. ಬಸವೇಗೌಡ, ಪುಟ್ಟಸ್ವಾಮಿಗೌಡ ಮತ್ತು ದೊಣೂರು ರಾಮು ಪಾಲ್ಗೊಳ್ಳಲಿದ್ದಾರೆ ಎಂದರು.

ಸಮ್ಮೇಳನದ ಸಂಚಾಲಕ ರಮೇಶ ಕೊರವಿ ಮಾತನಾಡಿ ‘ಮೊದಲ ದಿನ ಮಧ್ಯಾಹ್ನ 3 ಗಂಟೆಗೆ ಹೆಬಸೂರ ಭವನದಿಂದ ಚನ್ನಮ್ಮ ವೃತ್ತದವರೆಗೆ ಶೋಭಾಯಾತ್ರೆ ನಡೆಯಲಿದೆ. ಸಂಜೆ 7ಕ್ಕೆ ನೀರಿನ ಸದುಪಯೋಗ ಕುರಿತು ಗೋಷ್ಠಿ ನಡೆಯಲಿದೆ. ಜ. 4ರಂದು ಬೆಳಿಗ್ಗೆ 9ಕ್ಕೆ ಸಂಘಟನೆಯ ರೀತಿ ನೀತಿ ಮತ್ತು ಕಾರ್ಯಕರ್ತ, 10.30ಕ್ಕೆ ಸಾವಯವ ಕೃಷಿಯಲ್ಲಿ ಸ್ವಯಂ ತಯಾರಿ, ಮಧ್ಯಾಹ್ನ 12ಕ್ಕೆ ರೈತರ ಸಮಸ್ಯೆಗಳು ಮತ್ತು ಹೋರಾಟ ರೂಪರೇಷೆಗಳು ಗೋಷ್ಠಿ ನಡೆಯಲಿವೆ. ಮಧ್ಯಾಹ್ನ 1ಕ್ಕೆ ಸಮಾರೋಪ ಸಮಾರಂಭ ಮತ್ತು ಪ್ರಾಂತ ಸಮಿತಿ ಘೋಷಣೆ ಮಾಡಲಾಗುವುದು’ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳ ರೈತರು ಪಾಲ್ಗೊಳ್ಳಲಿದ್ದಾರೆ. ಪ್ರತಿ ಜಿಲ್ಲೆ, ತಾಲ್ಲೂಕು ಸಮಿತಿಯಿಂದ ಸುಮಾರು‌ 600 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಾಸರಗಟ್ಟ, ಧಾರವಾಡ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜುನಾಥ ಗೌರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT