ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ – ಬೆಂಗಳೂರು ರೈಲುಗಳು ಭಾಗಶಃ ರದ್ದು

Published 13 ಮೇ 2024, 15:46 IST
Last Updated 13 ಮೇ 2024, 15:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವಿಧ ಕಾಮಗಾರಿ ಕೈಗೊಳ್ಳುವ ಸಲುವಾಗಿ ಯಶವಂತಪುರ ಹಾಗೂ ಬೆಂಗಳೂರು ನಿಲ್ದಾಣಗಳ ನಡುವೆ  ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಮೇ 16 ಮತ್ತು 23ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು (17392) ಕೆಎಸ್‌ಆರ್ ಬೆಂಗಳೂರು ಬದಲು ಯಶವಂತಪುರದಲ್ಲಿ ತನ್ನ ಸೇವೆ ಕೊನೆಗೊಳಿಸಲಿದೆ.

ಮೇ 17 ಮತ್ತು 24 ರಂದು ಕೆಎಸ್ಆರ್ ಬೆಂಗಳೂರು-ಹೊಸಪೇಟೆ ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ರೈಲು (06243) ಕೆಎಸ್ಆರ್ ಬೆಂಗಳೂರಿನ ಬದಲಿಗೆ ಯಶವಂತಪುರ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದೆ.

ತಾತ್ಕಾಲಿಕ ನಿಲುಗಡೆ:

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ - ಸೋಲಾಪುರ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಪ್ಯಾಸೆಂಜರ್ ಸ್ಪೆಷಲ್ (07331/07332) ರೈಲುಗಳಿಗೆ ವಿಜಯಪುರ ಜಿಲ್ಲೆಯ ಪಡನೂರ ನಿಲ್ದಾಣದಲ್ಲಿ ಒಂದು ನಿಮಿಷದ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ.  ಮೂರು ತಿಂಗಳ ಕಾಲ ಅಂದರೆ ಆಗಸ್ಟ್ 11ರವರೆಗೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT