ಹುಬ್ಬಳ್ಳಿ–ಧಾರವಾಡ ಪಾಲಿಕೆಯಲ್ಲಿ ಎರಡು ಸಾವಿರ ಪೌರಕಾರ್ಮಿಕರು ಇದ್ದಾರೆ. ಒಬ್ಬರಿಗೆ ಐದು ಮೀಟರ್ ರಸ್ತೆ ಸ್ವಚ್ಛತೆ ವಹಿಸಿದರೆ ನಿತ್ಯ 10 ಕಿ.ಮೀ ಸ್ವಚ್ಛಗೊಳಿಸಬಹುದು. ನಗರ ಸ್ವಚ್ಛತೆ ನಿಟ್ಟಿನಲ್ಲಿ ‘ರೋಡ್ ಮ್ಯಾಪ್’ ಸಿದ್ದಪಡಿಸಬೇಕು
ಸಂತೋಷ ಲಾಡ್, ಸಚಿವ
ಡಿಡಿಪಿಐ ವಿರುದ್ಧ ಗರಂ
ಜಿಲ್ಲೆಯಲ್ಲಿ ಎಷ್ಟು ಶಾಲಾ ಕೊಠಡಿಗಳು ಸೋರುತ್ತಿವೆ ಎಂಬ ಮಾಹಿತಿ ಕೇಳಿದರೆ ನೀವು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಸಚಿವ ಲಾಡ್ ಅವರು ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರನ್ನು ತರಾಟೆಗೆ ತೆಗೆದುಕೊಂಡರು. ಶಾಲಾ ಗೋಡೆ ಚಾವಣಿ ಬಿದ್ದು ಅನಾಹುತ ಸಂಭವಿಸಿದರೆ ನೀವೇ ಹೊಣೆಗಾರರಾಗುತ್ತಿರಿ. ಶಿಥಿಲಗೊಂಡ ಹಾಗೂ ಸೋರುತ್ತಿರುವ ಅಂಗನವಾಡಿ ಹಾಗೂ ಶಾಲಾ ಕೊಠಡಿಗಳಲ್ಲಿ ತರಗತಿ ನಡೆಸಬಾರದು. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.