ಧಾರವಾಡ: ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ ಅವರು ರಂಗ ಚಟುವಟಿಕೆಗಳ ಮೂಲಕ ಹೊಸ ಪ್ರಯೋಗಗಳತ್ತ ಚಿತ್ತ ಹರಿಸಿದ್ದರು. ಬಹುಭಾಷಾ ನಾಟಕೋತ್ಸವ, ಚಿಣ್ಣರ ಮೇಳ, ಜೈಲುವಾಸಿಗಳಿಗೆ ನಾಟಕ ತರಬೇತಿ ಶಿಬಿರ ಆಯೋಜಿಸಿದ್ದರು.

ರಾಜು ಅವರು ಕಳೆದ ವರ್ಷ ಆಗಸ್ಟ್ನಲ್ಲಿ ಧಾರವಾಡ ರಂಗಾಯಣ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. 2025ರ ಫೆಬ್ರುವರಿ ‘ರಂಗಾಂತರಂಗ–2025 ’ ಬಹುಭಾಷಾ ನಾಟಕೋತ್ಸವ ಏರ್ಪಡಿಸಿದ್ದರು.

‘ಗ್ವಾಲೆ ಮತವಾಲೆ’ ಹಿಂದಿ ನಾಟಕ, ‘ಕಲಿವೇಷಂ' ಮಲೆಯಾಳಂ ನಾಟಕ, ‘ಸತ್ತವರ ನೆರವಳು’ ಮೊದಲಾದ ನಾಟಕಗಳು ಈ ನಾಟಕೋತ್ಸವದಲ್ಲಿ ಪ್ರದರ್ಶನವಾಗಿದ್ದವು. ನಂತರ ಬೇಸಿಗೆಯಲ್ಲಿ ‘ನಮ್ಮ ಸಂವಿಧಾನ ನಮ್ಮ ಕಲರವ’ ಶೀರ್ಷಿಕೆಯಡಿ ಚಿಣ್ಣರ ಮೇಳ ಆಯೋಜಿಸಿದ್ದರು. ಭಾಗವಹಿಸಿದ್ದ ಮಕ್ಕಳ ಐದು ತಂಡ ಮಾಡಿ ಅವರಿಗೆ ಐದು ನಾಟಕಗಳನ್ನು ಕಲಿಸಲಾಗಿತ್ತು.

ಕೇಂದ್ರ ಕಾರಾಗೃಹದ ವಾಸಿಗಳಿಗೆ ರಂಗ ತರಬೇತಿ ಶಿಬಿರ ಆಯೋಜಿಸಿದ್ದರು. ಆಗಸ್ಟ್ನಲ್ಲಿ ಜೈಲು ವಾಸಿಗಳು ‘ತಲೆದಂಡ’ ನಾಟಕವನ್ನು ಪ್ರದರ್ಶಿಸಿದ್ದರು. ತಪ್ಪು ತಿದ್ದಿಕೊಳ್ಳಲು ‘ತಲೆದಂಡ’ ನಾಟಕ ನೀತಿ ಪಾಠದಂತಿದೆ ಎಂದು ಹಲವರು ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ರಾಜು ತಾಳಿಕೋಟೆ ಅವರು ಮಹಾನಗರ ಪಾಲಿಕೆಯವರು ಬಯಲು ರಂಗಮಂದಿರ ಜಾಗವನ್ನು ರಂಗಾಯಣಕ್ಕೇ ಹಸ್ತಾಂತರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ನಾಟಕಕಾರ ಕಂದಗಲ್ ಹನುಮಂತರಾಯ ಅವರ ಸಮಗ್ರ ನಾಟಕಗಳನ್ನು ‘ಕಂದಗಲ್ ಭಾರತ’ ಹೆಸರಿನಲ್ಲಿ ಪ್ರದರ್ಶಿಸಬೇಕು, ಗಾಯಕಿ ಅಮೀರಾಬಾಯಿ ಕರ್ನಾಟಕಿ ಅವರ ಜೀವನಚರಿತ್ರೆಯ ಪ್ರದರ್ಶಿಸಬೇಕು ಎಂದು ಯೋಜನೆ ರೂಪಿಸಿದ್ದರು’ ಎಂದು ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲಿಯುಗದ ಕುಡುಕ’ ರಾಜು ತಾಳಿಕೋಟೆ ಅವರ ಹೆಸರಾಂತ ನಾಟಕ. ನಗರದ ಪಾಟೀಲ ಪುಟ್ಟಪ್ಪ ಭವನದಲ್ಲಿ ಈಚೆಗೆ ಈ ನಾಟಕವನ್ನು ಪ್ರದರ್ಶಿಸಿದ್ದರು. ಹಾಸ್ಯ ನಟನೆಗೆ ಅವರು ಹೆಸರಾಗಿದ್ದರು. ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ಅಂತಿಮ ದರ್ಶನಕ್ಕೆ ವ್ಯವಸ್ಥೆ

ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅವರ ಪಾರ್ಥಿವ ಶರೀರವನ್ನು ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಆವರಣಕ್ಕೆ ತರಲಾಗುವುದು. ಮಂಗಳವಾರ ಬೆಳಿಗ್ಗೆ 7ರಿಂದ 8 ಗಂಟೆವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶಕ್ಕೆ ಇಡಲಾಗುವುದು ಎಂದು ರಂಗಾಯಣದ ಆಡಳಿತಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.