ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಹೇರಿಟೇಜ್ ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ ಬುಧವಾರ ನಡೆಯಿತು.
ಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷರಾಗಿ ಅನಂತರಾಜ ಭಟ್ ಎನ್., ಕಾರ್ಯದರ್ಶಿಯಾಗಿ ಶಿವಪ್ರಸಾದ ಪಿ. ಬೇಕಲ್, ಖಜಾಂಚಿಯಾಗಿ ಸಿ.ಎಫ್. ಕುಬಿಹಾಳ ಮತ್ತು 27 ಜನ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.
ಮುಖ್ಯ ಅತಿಥಿಯಾಗಿದ್ದ ಐಪಿಡಿಜಿ ಸಂಗ್ರಾಮ ಪಾಟೀಲ ಮಾತನಾಡಿ ‘ರೋಟರಿ ಸಮಾಜಮುಖಿಯಾಗಿ ಗಮನಾರ್ಹ ಸೇವೆ ಮಾಡುತ್ತಿದೆ. ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿಯೂ ವಿಶ್ವದಾದ್ಯಂತ ಮಾನವೀಯ ಕೆಲಸಕ್ಕೆ ಕೈ ಜೋಡಿಸಿದೆ’ ಎಂದರು.
ಕೌಟುಂಬಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಹಾಗೂ ಕಾನೂನಿನ ಮಾಹಿತಿ ನೀಡಲು ’ಹೆರಿಟೇಜ್ ಸ್ತ್ರೀ ಸಕ್ಷಮ್’, 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಕುರಿತ ಶೈಕ್ಷಣಿಕ ಕಾರ್ಯಕ್ರಮ ‘ಹೆರಿಟೇಜ್ ಪರೀಕ್ಷಾ ಪರ್ವ’ ಮತ್ತು ಎಸ್‌ಡಿಎಂ ವೈದ್ಯಕೀಯ ವಿಜ್ಞಾನ ಕಾಲೇಜು ಸಹಯೋಗದಲ್ಲಿ ’ಹೆರಿಟೇಜ್ ಅಂಗದಾನ’ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಲಾಯಿತು.
ನರೀಂದರ ಬರವಾಲ, ಸುಧೀರ ಹಾರವಾಡ, ಹುಬ್ಬಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಸುಭಾಷಚಂದ್ರ ಹೊಲಳ್, ಕಾರ್ಯದರ್ಶಿ ಶಿವಪ್ರಸಾದ ಪಿ. ಬೆಕಲ್ ಪಾಲ್ಗೊಂಡಿದ್ದರು.