ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಲ್ಲಿ ಆರ್‌ಎಸ್‌ಎಸ್ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಬೈಠಕ್‌ಗೆ ಚಾಲನೆ

Last Updated 28 ಅಕ್ಟೋಬರ್ 2021, 10:35 IST
ಅಕ್ಷರ ಗಾತ್ರ

ಧಾರವಾಡ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಸಭೆಗೆ ಗುರುವಾರ ಇಲ್ಲಿ ಚಾಲನೆ ದೊರೆಯಿತು.

ಇಲ್ಲಿನ ಗರಗದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆರಂಭವಾದ ಬೈಠಕ್‌ಗೆ ಸಂಘದ ಮುಖ್ಯಸ್ಥ ಡಾ. ಮೋಹನ ಭಾಗವತ ಹಾಗೂ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಬೈಠಕ್‌ಗೆ ಚಾಲನೆ ನೀಡಿದರು.

ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದರಲ್ಲಿ ಪ್ರಮುಖವಾಗಿಸಂಸ್ಕಾರ ಭಾರತಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಮೀರ್ ಚಂದ್, ಕನ್ನಡ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತ ಎಚ್.ಎಸ್.ದೊರೆಸ್ವಾಮಿ, ಕವಿ ಡಾ. ಎಚ್.ಸಿದ್ದಲಿಂಗಯ್ಯ, ಕಾಂಗ್ರೆಸ್‌ ಮುಖಂಡ ಆಸ್ಕರ್ ಫರ್ನಾಂಡಿಸ್, ಸ್ವಾಮಿ ಅಧ್ಯಾತ್ಮಾನಂದ, ಸ್ವಾಮಿ ಓಂಕಾರಾನಂದ, ಸ್ವಾಮಿ ಅರುಣಗಿರಿ, ಹಿರಿಯ ಪತ್ರಕರ್ತ ಶ್ಯಾಮ್ ಖೋಸ್ಲಾ, ದೈನಿಕ್ ಜಾಗರಣ್ ಮಾಲೀಕ ಯೋಗೇಂದ್ರ ಮೋಹನ್ ಗುಪ್ತಾ, ಗೀತಾ ಪ್ರೆಸ್ ಗೋರಖಪುರ ಅಧ್ಯಕ್ಷ ರಾಧೇಶ್ಯಾಮ್ ಖೆಮ್ಕಾ, ಲೇಖಕರು ನರೇಂದ್ರ ಕೊಹ್ಲಿ, ರಾಜೇಶ್ ಸತವ್, ರಾಜ್ಯಸಭಾ ಸದಸ್ಯ ಸೋಲಿ ಸೊರಾಬ್ಜಿ, ಮಾಜಿ ರಾಜ್ಯಪಾಲ ಜಗಮೋಹನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಪತ್ರಕರ್ತ ರೋಹಿತ್ ಸರ್ದಾನ, ಚಿಪ್ಕೋ ಚಳವಳಿಯ ಸುಂದರ್ ಲಾಲ್ ಬಹುಗುಣ, ಅಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಮಹಾರಾಜ್, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಭೆಯಲ್ಲಿ ಸಂಘದ ಕಾರ್ಯದ ಪ್ರಸ್ತುತ ಸ್ಥಿತಿಗತಿ,ಕಾರ್ಯ ವಿಸ್ತಾರ ಹಾಗೂ ಕಾರ್ಯಕರ್ತರ ವಿಕಾಸದ ಯೋಜನೆಗಳ ಕುರಿತು ಚರ್ಚೆ ನಡೆಯಿತು. ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ನಡೆದ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ನಿರ್ಣಯವನ್ನು ಅಂಗೀಕರಿಸುವ ಕುರಿತು ಚರ್ಚೆ ನಡೆಯಿತು.

ದೇಶದ ಎಲ್ಲಾ ಪ್ರದೇಶಗಳಿಂದ ಬಂದ ಸಂಘದ ಸುಮಾರು 350 ಕಾರ್ಯಕರ್ತರು ಈ ಬೈಠಕ್‌ನಲ್ಲಿ ಪಾಲ್ಗೊಂಡಿದ್ದಾರೆ. ಅ. 30ರವರೆಗೆ ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT