ಹುಬ್ಬಳ್ಳಿ: ನವದೆಹಲಿಯ ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ಈಚೆಗೆ ನಡೆದ ‘ಎಸ್ಎಇ ಸುಪ್ರ 2025 ರೇಸ್’ನಲ್ಲಿ ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ಸಿದ್ಧಪಡಿಸಿದ ‘ವೇಗದೂತ ರೇಸಿಂಗ್’ ಕಾರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಸಹಿಷ್ಣುತೆ, ಆಟೊಕ್ರಾಸ್ ವಿಭಾಗದಲ್ಲಿ ಪ್ರಥಮ ಹಾಗೂ ಸ್ಕಿಡ್ಪ್ಯಾಡ್, ಆ್ಯಕ್ಸಲರೇಷನ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸುವುದರೊಂದಿಗೆ ಈ ತಂಡವು ಸಮಗ್ರವಾಗಿ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ.

ಸಂಗಮೇಶ ಕಾಮಗೊಂಡ ಹಾಗೂ ಸಜಲ್ ನಾಯ್ಕ ನೇತೃತ್ವದ ‘ವೇಗದೂತ ರೇಸಿಂಗ್’ ತಂಡದಲ್ಲಿ ಎಂಜಿನಿಯರಿಂಗ್ನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ವಿನ್ಯಾಸ, ನಿರ್ಮಾಣ ಮತ್ತು ಪರೀಕ್ಷೆ ನಡೆಸಿ ಕಾರ್ ಅನ್ನು ಸಿದ್ಧಪಡಿಸಿದ್ದಾರೆ.

‘ಈ ಫಲಿತಾಂಶವು ಸಂಸ್ಥೆಯ ವಿದ್ಯಾರ್ಥಿಗಳ ತಾಂತ್ರಿಕ ಪರಿಣತಿ ಮತ್ತು ಸಂಶೋಧನಾ ಎಂಜಿನಿಯರಿಂಗ್ ಕೌಶಲಕ್ಕೆ ಸಾಕ್ಷಿಯಾಗಿದೆ’ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.