ಹುಬ್ಬಳ್ಳಿ: ‘ಸುನ್ನಿ ದಾವತೆ ಇಸ್ಲಾಮಿ (ಎಸ್ಡಿಐ) 28ನೇ ರಾಜ್ಯಮಟ್ಟದ ವಾರ್ಷಿಕ ಸಮ್ಮೇಳನ ‘ಸುನ್ನಿ ಇಜ್ತೆಮಾ’ ಅನ್ನು ಜ.3 ಮತ್ತು 4ರಂದು ನಗರದ ಕಾರವಾರ ರಸ್ತೆಯ ಈದ್ಗಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಹುಬ್ಬಳ್ಳಿ ಸುನ್ನಿ ದಾವತೆ ಇಸ್ಲಾಮಿ ಅಧ್ಯಕ್ಷ ಮೆಹಬೂಬ್ ಕಲೈಗಾರ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿಕ್ಷಣ ಜಾಗೃತಿ, ವೃತ್ತಿ ಕೌಶಲಾಭಿವೃದ್ಧಿ ಹಾಗೂ ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಜ.3ರಂದು ಬೆಳಿಗ್ಗೆ 10 ಗಂಟೆಗೆ ಮಹಿಳೆಯರ ಸಮ್ಮೇಳನ ನಡೆಯಲಿದ್ದು, ಮುಂಬೈನ ಮಹಮ್ಮದ್ ರಿಜ್ವಾನ್ ಖಾನ್ ಉದ್ವಾಟಿಸುವರು. ಸುನ್ನಿ ದಾವತೆ ಇಸ್ಲಾಮಿ ಸಂಸ್ಥಾಪಕ ಅಧ್ಯಕ್ಷ ಮೌಲಾನಾ ಮಹಮ್ಮದ್ ಶಾಕೀರ್ ಅಲಿ ನೂರಿ, ಉತ್ತರಪ್ರದೇಶದ ಅಲ್ ಜಾಮಿಯತುಲ್ ಅಶ್ರಫಿಯಾ ವಿಶ್ವವಿದ್ಯಾಲಯದ ಮುಫ್ತಿ ನಿಜಾಮುದ್ದಿನ್ ಮಿಸ್ಬಾಹಿ, ಮಹಾರಾಷ್ಟ್ರದ ಮೌಲಾನಾ ಸಯ್ಯದ್ ಅಮಿನುಲ್ ಖಾದ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಆಧುನಿಕ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ, ಮಹಿಳಾ ಸಮಾನತೆ, ಶೈಕ್ಷಣಿಕ ಹಕ್ಕುಗಳು, ಸಾಮಾಜಿಕ ಜವಾಬ್ದಾರಿ ಕುರಿತು ಚರ್ಚೆ ನಡೆಯಲಿದೆ’ ಎಂದು ತಿಳಿಸಿದರು.

‘ಜ.4ರಂದು ಬೆ.10 ಗಂಟೆಗೆ ಪುರುಷರ ಸಮ್ಮೇಳನ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಟೀಮ್ ಎಸ್ಡಿಐ ಉಮ್ಮೀದ್ ವತಿಯಿಂದ ವಿದ್ಯಾರ್ಥಿಗಳಿಗೆ ಕರಿಯರ್ ಗೈಡನ್ಸ್, ವೃತ್ತಿ ಕೌಶಲಾಭಿವೃದ್ಧಿ ಕುರಿತು ತರಬೇತಿ ಆಯೋಜಿಸಲಾಗಿದೆ. ಸಂಜೆ ಉಪನ್ಯಾಸ ನಡೆಯಲಿದೆ. ಸಮ್ಮೇಳನದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಹುಬ್ಬಳ್ಳಿ ಸುನ್ನಿ ದಾವತೆ ಇಸ್ಲಾಮಿಯ ಉಪಾಧ್ಯಕ್ಷ ಮಹಮ್ಮದ್ ಅಸ್ಲಂ ಮುಜಾಹಿದ್, ಸದಸ್ಯರಾದ ಅಬ್ದುಲ್ ರಹೀಂ ಲಷ್ಕರ್, ಖಾಲಿದ್ ಖತೀಬ್, ರಬ್ಬಾನಿ ಮಾಜಿದಂಡಿ, ಫಝಿಲತ್ ಹುಸೇನ್, ಅಬಿದ್ ಅಲಿ ಫರಾಷ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.