ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಇ ವಿ.ವಿಯಲ್ಲಿ ಸೀಡ್‌ ಪ್ರಯೋಗಾಲಯ

ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನೆಗೆ ಅನುಕೂಲ
Last Updated 3 ಆಗಸ್ಟ್ 2021, 15:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನೆ ನಡೆಸಲು ಸ್ಯಾಮ್‌ಸಂಗ್‌ ಕಂಪನಿ ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸೀಡ್‌ ಪ್ರಯೋಗಾಲಯ ಪ್ರಾರಂಭಿಸಿದೆ.

ಇದರಿಂದ ವಿಶ್ವಮಟ್ಟದ ಕೃತಕ ಬುದ್ಧಿಮತ್ತೆ, ಮಷಿನ್‌ ಲರ್ನಿಂಗ್‌ ಮತ್ತು ದತ್ತಾಂಶಗಳ ದಾಖಲೀಕರಣ ಸುಲಭವಾಗುತ್ತದೆ. ಸ್ಯಾಮ್‌ಸಂಗ್ ರಾಜ್ಯದಲ್ಲಿ ಮಾಡಿದ ಮೊದಲ ಹೊಸ ಪ್ರಯತ್ನ ಇದಾಗಿದೆ. ಪ್ರಯೋಗಾಲಯದಿಂದಾಗಿ ಸ್ಯಾಮ್‌ಸಂಗ್ ಸ್ಟೂಡೆಂಟ್‌ ಇಕೊಸಿಸ್ಟಂ ಫಾರ್‌ ಎಂಜಿನಿಯರ್ಸ್‌ ಡಾಟಾ ಲ್ಯಾಬ್‌ನಲ್ಲಿ ಕೆಎಲ್‌ಇ ವಿದ್ಯಾರ್ಥಿಗಳು ಹಿರಿಯ ಎಂಜಿನಿಯರ್‌ಗಳ ಜೊತೆ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ.

ಸೀಡ್‌ ಪ್ರಯೋಗಾಲಯ ಮೂರು ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಡಿವೈಸ್‌ಗಳು, ಚಿತ್ರದ ಗುಣಮಟ್ಟ ವಿಶ್ಲೇಷಣೆ ಮತ್ತು ಬಹುಮಾಧ್ಯಮಗಳ ಮೇಲೆ ಸಂಶೋಧನೆಗಳನ್ನು ನಿರ್ವಹಿಸಲು ಬೇಕಾಗುವ ಬೆಳಕಿನ ಸಾಧನ ಹೊಂದಿದ ವಿಶೇಷ ಡಾರ್ಕ್‌ ಕೊಠಡಿಯ ಸೌಲಭ್ಯ ಇರಲಿದೆ.

ಸ್ಯಾಮ್‌ಸಂಗ್‌ನ ಆರ್‌ ಆ್ಯಂಡ್‌ ಡಿ ಇನ್‌ಸ್ಟಿಟ್ಯೂಟ್‌ನ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ದಿಪೇಶ್‌ ಶಾ ಮಾತನಾಡಿ ‘ಪ್ರಯೋಗಾಲಯ ಭಾರತದ ಆವಿಷ್ಕಾರ ವ್ಯವಸ್ಥೆಯನ್ನು ಉತ್ತೇಜಿಸಿ, ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಅಣಿಗೊಳಿಸಲು ನೆರವಾಗುತ್ತದೆ. ಕೆಎಲ್‌ಇಯ ಬಿ.ಟೆಕ್‌, ಎಂ.ಟೆಕ್‌ ವಿದ್ಯಾರ್ಥಿಗಳು ಮತ್ತು ಪಿಎಚ್‌.ಡಿ. ಸಂಶೋಧಕರಿಗೆ ಮುಕ್ತವಾಗಿರುತ್ತದೆ’ ಎಂದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್‌ ಪ್ರತಿಕ್ರಿಯಿಸಿ ‘ಜಗತ್ತು ಹೆಚ್ಚು ದತ್ತಾಂಶಗಳ ದಾಖಲೀಕರಣ ಕೇಂದ್ರಿತವಾಗುತ್ತಿದೆ. ಹೊಸ ಪ್ರಯೋಗಾಲಯದಿಂದ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ. ಇದರಿಂದಾಗಿ ನಾವು ಜೀವಿಸುವ, ಕೆಲಸ ಮಾಡುವ ಮತ್ತು ವ್ಯಾಪಾರ ಮಾಡುವ ವಿಧಾನ ಬದಲಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT