ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ–ರಾಮೇಶ್ವರಂ, ಹುಬ್ಬಳ್ಳಿ–ಬೆಂಗಳೂರು ರೈಲು ಸಂಚಾರ ಸೌಲಭ್ಯ ವಿಸ್ತರಣೆ

ನೈರುತ್ಯ ರೈಲ್ವೆಯ ವಿವಿಧ ವಿಶೇಷ ರೈಲುಗಳ ಸಂಚಾರ ಸೌಲಭ್ಯ ವಿಸ್ತರಣೆ
Published 13 ಜೂನ್ 2024, 15:49 IST
Last Updated 13 ಜೂನ್ 2024, 15:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ವಿವಿಧ ವಿಶೇಷ ರೈಲುಗಳ ಸಂಚಾರ ಸೌಲಭ್ಯ ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಹುಬ್ಬಳ್ಳಿ–ರಾಮೇಶ್ವರಂ (07355) ವಿಶೇಷ ರೈಲು ಸಂಚಾರವನ್ನು ಜುಲೈ 6ರಿಂದ ಡಿಸೆಂಬರ್‌ 28ರವರೆಗೆ, ರಾಮೇಶ್ವರಂ–ಹುಬ್ಬಳ್ಳಿ (07356) ರೈಲು ಸಂಚಾರವನ್ನು ಜುಲೈ1ರಿಂದ ಡಿಸೆಂಬರ್‌ 31ರವರೆಗೆ ವಿಸ್ತರಿಸಿದೆ.

ಹುಬ್ಬಳ್ಳಿ–ಕೆಸಿಆರ್‌ ಬೆಂಗಳೂರು (07339) ರೈಲು ಸಂಚಾರವನ್ನು ಜುಲೈ 1ರಿಂದ ಡಿಸೆಂಬರ್‌ 31ರವರೆಗೆ, ಕೆಸಿಆರ್‌ ಬೆಂಗಳೂರು–ಹುಬ್ಬಳ್ಳಿ (07340) ರೈಲು ಸಂಚಾರವನ್ನು ಜುಲೈ 2ರಿಂದ 2025ರ ಜನವರಿ 1ರವರೆಗೆ ವಿಸ್ತರಿಸಲಾಗಿದೆ. 

ಮಾರ್ಗ ಬದಲಾವಣೆ:

ಹುಬ್ಬಳ್ಳಿ–ಡಾ.ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌–ಹುಬ್ಬಳ್ಳಿ (22697/22698) ಸಾಪ್ತಾಹಿಕ ರೈಲು ಯಶವಂತಪುರ ನಿಲ್ದಾಣದ ಬದಲು, ಯಶವಂತಪುರ ಬೈಪಾಸ್‌ ಮೂಲಕ ಸಂಚರಿಸಲಿದೆ.

ಸೆಪ್ಟೆಂಬರ್‌ 7ರಿಂದ ಹುಬ್ಬಳ್ಳಿ– ಡಾ.ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌ (22697) ರೈಲು, ಸೆ.8ರಿಂದ ಡಾ.ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌–ಹುಬ್ಬಳ್ಳಿ (22698) ರೈಲು ಬದಲಿ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT