ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ ಜ್ವರದ ಲಕ್ಷಣ: ಸಮೀಕ್ಷೆಗೆ ಸೂಚನೆ

Published 28 ಮಾರ್ಚ್ 2024, 15:12 IST
Last Updated 28 ಮಾರ್ಚ್ 2024, 15:12 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಗ್ರಾಮದಲ್ಲಿ ಡೆಂಗಿ ಜ್ವರ ಕಂಡು ಬಂದಿದ್ದರಿಂದ ಬುಧವಾರ ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಬ್ಯಾರಲ್‌ನಲ್ಲಿನ ನೀರಿನ ಪರೀಕ್ಷೆ ಕೈಗೊಂಡು ಲಾರ್ವಾ ಸಮೀಕ್ಷೆ ಕೈಗೊಂಡರು.

ಗ್ರಾಮದ ಒಬ್ಬರಿಗೆ ಡೆಂಗಿ ಜ್ವರದ ಲಕ್ಷಣ ಕಂಡು ಬಂದಿದ್ದು, ಮುಂಜಾಗ್ರತೆಗಾಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಹಾಗೂ ಅಧಿಕಾರಿಗಳು ಪ್ರತಿಯೊಂದು ಮನೆಗಳಿಗೆ ಕೈಯಲ್ಲಿ ಬ್ಯಾಟರಿ, ಥಿಮೋಪಾಸ್ ಔಷಧಿಯ ಬಾಟಲಿ, ವರದಿ ಬುಕ್ ಹಿಡಿದುಕೊಂಡು ಲಾರ್ವಾ ಸಮೀಕ್ಷೆ ಮಾಡುತ್ತಿದ್ದಾರೆ.

ಗ್ರಾಮದ ಪ್ರತಿ ಮನೆಗಳಲ್ಲಿನ ಪಾತ್ರೆ, ಕೊಡ, ಬ್ಯಾರಲ್, ಡ್ರಮ್ ಸೇರಿದಂತೆ ಮನೆಗಳ ಸುತ್ತಲಿನ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿ ಮನೆಯವರಿಗೆ ಲಾರ್ವಾ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮದ ಕುರಿತು ಮಾಹಿತಿ ನೀಡುತ್ತಿದ್ದಾರೆ.
ಉಪ್ಪಿನಬೆಟಗೇರಿಯ 5ನೇ ವಾರ್ಡ್‌ನಲ್ಲಿ ಡೆಂಗಿ ಪ್ರಕರಣ ಕಂಡು ಬಂದಿದೆ. ಆಶಾ ಕಾರ್ಯಕರ್ತೆಯರು ಕಳೆದ ಮೂರು ದಿನಗಳಿಂದ ಮನೆಗಳಿಗೆ ತೆರಳಿ ನೀರಿನಲ್ಲಿ ಲಾರ್ವಾ ಹುಳುಗಳು ಕಂಡು ಬಂದ ನೀರನ್ನು ಹೊರಗೆ ಚೆಲ್ಲುತ್ತಿದ್ದಾರೆ.

ಕೆಲ ಮನೆಗಳಲ್ಲಿ ತುಂಬಿಸಿಟ್ಟ ನೀರಿನಲ್ಲಿ ಹುಳುಗಳಾಗದಂತೆ ಆಶಾ ಕಾರ್ಯಕರ್ತೆಯರು ಥಿಮೋಪಾಸ್ ಔಷಧಿ ಹಾಕುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಹುಳಗಳಾದ ನೀರನ್ನು ನೆಲಕ್ಕೆ ಸುರುವುತ್ತಿದ್ದೇವೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕೆಲ ಮನೆಯವರು ನಮ್ಮೊಂದಿಗೆ ಜಗಳ ಮಾಡುತ್ತಿದ್ದಾರೆ. ಇದರಿಂದ ಸರ್ವೆ ಮಾಡಲು ತೊಂದರೆಯಾಗುತ್ತಿದೆ. ಡೆಂಗಿ ಹರಡದಂತೆ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಈ ಕೆಲಸ ಮಾಡಲಾಗುತ್ತಿದೆ. ಗ್ರಾಮಸ್ಥರು ಲಾರ್ವಾ ಸಮೀಕ್ಷೆ ಮಾಡಲು ಸಹಕರಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಮನವಿ ಮಾಡಿದರು.

ಡೆಂಗು ಜ್ವರದ ಕುರಿತು ಆರೋಗ್ಯ ಇಲಾಖೆ ಅವರಿಂದ ಮಾಹಿತಿ ಪಡೆದು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಮುನ್ನಚ್ಚರಿಕೆ ವಹಿಸಬೇಕು 

-ಮಂಜುನಾಥ ಮಸೂತಿ ಅಧ್ಯಕ್ಷ ಉಪ್ಪಿನಬೆಟಗೇರಿ ಗ್ರಾ.ಪಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT