ಧಾರವಾಡ: ‘ಟೆಲಿ ಮನಸ್ ಕಾರ್ಯಕ್ರಮದ ಉದ್ದೇಶ, ಪ್ರಾಮುಖ್ಯವನ್ನು ಆಪ್ತ ಸಮಾಲೋಚಕರು ತಿಳಿದುಕೊಂಡು, ಉತ್ತಮವಾಗಿ ಕಾರ್ಯನಿರ್ವಹಿಸಬೇಕು’ ಎಂದು ಬೆಂಗಳೂರಿನ ಆರೋಗ್ಯಸೌಧದ ಮಾನಸಿಕ ಆರೋಗ್ಯ ವಿಭಾಗದ ಉಪನಿರ್ದೇಶಕಿ ಡಾ. ರಜನಿ ಪಿ. ಹೇಳಿದರು.

ಧಾರವಾಡದ ಡಿಮ್ಹಾನ್ಸ್ನಲ್ಲಿ ಈಚೆಗೆ ನಡೆದ ಟೆಲಿ ಮನಸ್ ವಿಭಾಗದ ಆಪ್ತ ಸಮಾಲೋಚಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘14416 ಮತ್ತು 1800-89-14416 ಟೆಲಿ ಮನಸ್ ಸಹಾಯವಾಣಿ ಸಂಖ್ಯೆಗಳಾಗಿವೆ’ ಎಂದರು.

ಡಾ. ಎನ್. ಮಂಜುನಾಥ ಮಾತನಾಡಿ, ‘ಆಪ್ತಸಮಾಲೋಚನೆಯ ಕೌಶಲಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಮಾನಸಿಕ ಆರೋಗ್ಯ ಸೇವೆಗಳನ್ನು ಸಮರ್ಥವಾಗಿ ನಿರ್ವಹಿಸಬೇಕು’ ಎಂದು ತಿಳಿಸಿದರು.

ಟೆಲಿ-ಮನಸ್ ವಿಭಾಗದ ನೋಡೆಲ್ ಅಧಿಕಾರಿ ಡಾ. ರಂಗನಾಥ ಕುಲಕರ್ಣಿ ಮಾತನಾಡಿ, ‘ಟೆಲಿ-ಮನಸ್ ವಿಭಾಗದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾನಸಿಕ ಆರೋಗ್ಯ ಜಾಗೃತಿಗೆ ಒತ್ತು ನೀಡಲಾಗಿದೆ’ ಎಂದರು.

ಡಿಮ್ಹಾನ್ಸ್ ನಿರ್ದೇಶಕ ಡಾ. ಅರಣಕುಮಾರ ಸಿ. ಅಧ್ಯಕ್ಷತೆ ವಹಿಸಿದ್ದರು. ಡಾ. ನವೀನಕುಮಾರ ಸಿ., ಮುಖ್ಯಆಡಳಿತಾಧಿಕಾರಿ ಸಿದ್ದಲಿಂಗಯ್ಯ ಹಿರೇಮಠ, ಸೂಪರಿಂಟೆಂಡೆಂಟ್ ಡಾ. ರಾಘವೇಂದ್ರ ನಾಯಕ, ಡಾ. ರಾಘವೇಂದ್ರ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.