ಹುಬ್ಬಳ್ಳಿ: ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪದ್ಧತಿ ಸೇರಿದಂತೆ ಇನ್ನಷ್ಟು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸಬೇಕು ಎಂದು ಸರ್ಕಾರ 2017ರಲ್ಲಿ ಆದೇಶ ನೀಡಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಐಡಿಪಿ ಸಾಲಪ್ಪ ವರದಿ ಪ್ರಕಾರ 500 ಜನರಿಗೆ ಒಬ್ಬ ಪೌರ ಕಾರ್ಮಿಕನನ್ನು ನಿಗದಿ ಮಾಡಬೇಕು ಎಂದು ಹೇಳಿದೆ. ಆದರೆ, ಸರ್ಕಾರ 700 ಜನರಿಗೆ ಒಬ್ಬ ಪೌರ ಕಾರ್ಮಿಕನನ್ನು ನಿಯೋಜಿಸಿದೆ. ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಕಾಯಂ ಪೌರ ಕಾರ್ಮಿಕರಿಗೆ 320 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರೂ, ಕಾಮಗಾರಿ ಅರಂಭವಾಗಿಲ್ಲ. ನವನಗರದಲ್ಲಿ ಹಕ್ಕು ಪತ್ರಗಳನ್ನು ವಿತರಿಸಿದ್ದರೂ, ಫಲಾನುಭವಿಗಳ ಹೆಸರಿನಲ್ಲಿ ದಾಖಲೆಯಾಗಿಲ್ಲ ಎಂದು ದೂರಿದರು.

ಶ್ರೀದೇವಿ ನಲ್ಲನಮ್ಮ ಸಮಾಜ ಕಲ್ಯಾಣ ಸೇವಾ ಸಂಘ ಪಂಚ ಸಮಿತಿ ಸದಸ್ಯರು ‘ನಮ್ಮ ಸಮಾಜದ ಗುತ್ತಿಗೆ ಪೌರ ಕಾರ್ಮಿಕರು ಅವಳಿ ನಗರಗಳ ಸ್ವಚ್ಛತೆಗೆ ದುಡಿಯುತ್ತಿದ್ದರೂ ಅವರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ’ ಎಂದರು.

ಮನವಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಶೆಟ್ಟರ್ ‘ಪೌರ ಕಾರ್ಮಿಕರಿಗೆ ಹಿಂದೆಯೂ ಸಮಸ್ಯೆಯಾದಾಗ ಪರಿಹರಿಸಿದ್ದೇನೆ. ಈಗಲೂ ಅವರ ಜೊತೆ ಇರುತ್ತೇನೆ. ಅಧಿಕಾರಿಗಳ ಜೊತೆ ಚರ್ಚಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಂಘದ ಪ್ರಮುಖರಾದ ದುರಗಪ್ಪ ವೀರಾಪುರ, ಗಂಗಾಧರ ಎಚ್. ಟಗರಗುಂಟಿ, ನಿಂಗಪ್ಪ ಮೊರಬದ, ಬಿ.ಬಿ. ಕೆಂಪಣ್ಣವರ, ಗುರುನಾಥ ಉಳ್ಳಿಕಾಶಿ, ಗಣೇಶ ಟಗರಗುಂಟಿ, ಬಸಪ್ಪ ಮಾದರ, ಯಮನೂರ ಗುಡಿಯಾಳ, ವೆಂಕಟೇಶ ನೀರಗಟ್ಟಿ, ಹೊನ್ನೂರಪ್ಪ ದೇವಗಿರಿ, ಶ್ರೀನಿವಾಸ ಬೆಳದಡಿ, ಲೋಹಿತ ಗಾಮನಗಟ್ಟಿ, ಪ್ರಸಾದ ಪೆರೂರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.