ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆ: ವೈದ್ಯೆ ಮೇಲೆ ಹಲ್ಲೆ

Last Updated 18 ಡಿಸೆಂಬರ್ 2020, 18:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವೈದ್ಯರು ಕೋವಿಡ್ ಪರೀಕ್ಷೆ ನಡೆಸಲು ಮುಂದಾದಾಗ, ಅವರ ಮೇಲೆ ಮೂವರು ಮಹಿಳೆಯರು ಹಲ್ಲೆ ನಡೆಸಿದ ಪ್ರಕರಣ ಶುಕ್ರವಾರ ನಗರದ ಹಳೇ ಬಸ್ ನಿಲ್ದಾಣದಲ್ಲಿ ನಡೆದಿದೆ.

ಜಿಲ್ಲಾ‌ ಆರೋಗ್ಯ ಇಲಾಖೆ ಮಾಸ್ಕ್ ಧರಿಸದೆ ಓಡಾಡುವವರ ಮೇಲೆ ನಿಗಾ ಇರಿಸಿದ್ದು, ಅವರನ್ನು ಕಡ್ಡಾಯ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಯೋಜನೆ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಳೇ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸುವಾಗ, ಮೂವರು ಇಟ್ಟಿಗಟ್ಟಿ ಗ್ರಾಮದ ಮಹಿಳೆಯರು ಮಾಸ್ಕ್ ಧರಿಸದೆ ಇರುವುದು ಕಂಡು ಬಂದಿತ್ತು. ಡಾ. ಕೋಮಲಾ ಅವರು, ಮಹಿಳೆಯರ ಬಳಿ ತೆರಳಿ ಕೋವಿಡ್ ಪರೀಕ್ಣೆಗೆ ಬರುವಂತೆ ತಿಳಿಸಿ, ಮೊಬೈಲ್ ನಂಬರ್ ಕೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ವಾಗ್ವಾದ ನಡೆದಿದೆ. ಕೋಪಗೊಂಡ ಮಹಿಳೆಯರು ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದಾಗ, ಹಲ್ಲೆ ನಡೆಸಿದ ಮಹಿಳೆಯರು, ನಮ್ಮನ್ನು ಬಿಟ್ಟು ಬಿಡಿ ಎಂದು ವೈದ್ಯರಲ್ಲಿ ಕ್ಷಮೆ ಕೇಳಿದ್ದಾರೆ.‌ ಅದಕ್ಕೊಪ್ಪದ ವೈದ್ಯೆ ಕೋಮಲಾ, ಉಪನಗರ ಪೊಲೀಸ್‌ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT