ಹುಬ್ಬಳ್ಳಿ: ‘ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದ್ದು, ಜಲಪ್ರಳಯ ಆಗುವ ಲಕ್ಷಣಗಳಿವೆ. ಪ್ರಕೃತಿ ಮುನಿದಿದ್ದು ಸರಿಯಾಗಲಿದೆ’ ಎಂದು ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಾಗತಿಕ ಮಟ್ಟದಲ್ಲಿ ಜಲಪ್ರಳಯ ಸಂಭವಿಸಿ ಒಂದೆರಡು ರಾಷ್ಟ್ರಗಳು ಮುಳುಗುವ ಸಾಧ್ಯತೆ ಇದೆ. ಬೇರೆ ಎಲ್ಲೋ ಕಡೆ ಬಾಂಬ್ ಸ್ಫೋಟದಂತಹ ಘಟನೆಗಳು ಸಂಭವಿಸಿ ವಿಷಾನಿಲದಿಂದ ಭಾರತದಲ್ಲಿ ಜನರು ಅಕಾಲಿಕವಾಗಿ ಸಾವನ್ನಪ್ಪುವ ಸಂಭವ ಇದೆ’ ಎಂದರು.

‘ವಿಜಯದಶಮಿಯಿಂದ ಸಂಕ್ರಾಂತಿಯೊಳಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುವಂತ ದುರ್ಘಟನೆ ರಾಷ್ಟ್ರಮಟ್ಟದಲ್ಲಿ ನಡೆಯಲಿದೆ. ಆಳುವವರು ಅರಿತರೆ ಇದರಿಂದ ಪಾರಾಗಬಹುದು. ಕರುನಾಡಿಗೂ ಕೆಲವು ಆಪತ್ತುಗಳು ಇದ್ದು, ಸಾವು ನೋವುಗಳು ಸಂಭವಿಸಲಿವೆ. ದೈವಕೃಪೆಯಿಂದ ಇವೆಲ್ಲವೂ ಪಾರಾಗುತ್ತವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಸ್ಥಿರ ಸರ್ಕಾರ ಬರಲಿದೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಒಬ್ಬ ವ್ಯಕ್ತಿಯೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಿವುದಿಲ್ಲ‘ ಎಂದರು.

ಈ ಸರ್ಕಾರ ಸ್ಥಿರವಾಗಿ ಇರುತ್ತದೆಯೇ ಎಂಬುದಕ್ಕೆ, ‘ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ. ಊರಿನಲ್ಲಿನ ಎಲ್ಲ ವಾಸನೆಯನ್ನು ಮೂಗು ಗ್ರಹಿಸುತ್ತದೆ’ ಎಂದು ವಿಶ್ಲೇಷಿಸಿದರು.

‘ಬಡವರು, ನಿರ್ಗತಿಕರಿಗೆ ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗಲಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಸ್ವತಂತ್ರವಾಗಿ ಪ್ರಯಾಣಿಸಲು ಸಾಧ್ಯವಾಗಿದೆ’ ಎಂದರು.

ಮುಂಬರುವ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ‘ಸತ್ಯ ಅಪ್ರಿಯವಾಗಿರುತ್ತದೆ. ಸುಳ್ಳು ಪ್ರಿಯವಾಗಿರುತ್ತದೆ. ನಾನು ಸತ್ಯ ಹೇಳಿದರೆ ಮಠಕ್ಕೆ ಹೋಗುವುದಿಲ್ಲ. ಸಂದರ್ಭ ಬಂದಾಗ ಈ ಬಗ್ಗೆ ಹೇಳುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.