ಧಾರವಾಡ: ನಗರದ ಮುರಘಾಮಠದಲ್ಲಿ ಮೃತ್ಯುಂಜಯಪ್ಪ ಸ್ವಾಮೀಜಿ 138ನೇ ವರ್ಧಂತಿ ಉತ್ಸವ ಶುಕ್ರವಾರ ಜರುಗಿತು.

ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಸ್ವಾಮೀಜಿ ಕರ್ತೃ ಗದ್ದುಗೆಗೆ ಪೂಜೆ ನೆರವೇರಿಸಲಾಯಿತು. ಪಲ್ಲಕ್ಕಿ ಮೆರವಣಿಗೆಯು ಸವದತ್ತಿ ರಸ್ತೆ, ಹಾವೇರಿಪೇಟ ವೃತ್ತ ಹಾದು ವಾಪಸ್ ಮಠದ ಆವರಣದಲ್ಲಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಮೃತ್ಯುಂಜಯಪ್ಪ ಸ್ವಾಮೀಜಿ ತನು, ಮನ, ಧನವನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸಿದ ದಾಸೋಹಿಯಾಗಿದ್ದರು. ಇಲ್ಲಿನ ಪ್ರಸಾದ ನಿಲಯವು ಅವರ ದೂರದೃಷ್ಟಿಯ ಫಲ. ಸಮಾಜ ಕಾರ್ಯಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದರು’ ಎಂದರು.

ಬಸವಲಿಂಗ ಸ್ವಾಮಿಜಿ, ಮಠದ ಆಡಳಿತ ಮಂಡಳಿ ಉಪಾಧ್ಯಕ್ಷ ನಾಗರಾಜ ಪಟ್ಟಣಶೆಟ್ಟಿ, ಕಾರ್ಯದರ್ಶಿ ಡಿ.ಬಿ. ಲಕ್ಕಮ್ಮನಹಳ್ಳಿ, ವಿರೂಪಾಕ್ಷ ಕಟಗಿ, ಮಂಜುನಾಥ ಸಾಲಿಮಠ, ಬಿ.ಎಸ್. ಗಣಾಚಾರಿ, ಶಿವಣ್ಣ ಹೊಸೂರ, ಶಿವಯೋಗಿ ಇಂಡಿ, ಸತೀಶ ತುರಮರಿ, ಎಸ್.ಜಿ. ನಡಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.