ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ದೇಶಪಾಂಡೆ ಫೌಂಡೇಶನ್ ಕೌಶಲಾಭಿವೃದ್ಧಿ ಕೇಂದ್ರಕ್ಕೆ ಚಾಲನೆ

ಕನ್ನಡದಲ್ಲಿ ಭಾಷಣ ಆರಂಭಿಸಿದ ಉಪರಾಷ್ಟ್ರಪತಿ
Last Updated 2 ಫೆಬ್ರುವರಿ 2020, 6:53 IST
ಅಕ್ಷರ ಗಾತ್ರ
ADVERTISEMENT
""

ಹುಬ್ಬಳ್ಳಿ:ದೇಶಪಾಂಡೆ ಫೌಂಡೇಶನ್‌ನಕೌಶಲಾಭಿವೃದ್ಧಿಕೇಂದ್ರವನ್ನು ಭಾನುವಾರ ಉದ್ಘಾಟಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡುತಮ್ಮ ಭಾಷಣವನ್ನು ಕನ್ನಡದಲ್ಲಿ ಪ್ರಾರಂಭಿಸಿದರು.

ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು ಹೆಸರಿಸಿದ ಅವರು, ವಿದೇಶದಿಂದ ತಾಯ್ನಾಡಿಗೆ ಮರಳಿ ಬಂದ ಡಾ.ಗುರುರಾಜ ದೇಶಪಾಂಡೆ ಅವರು ಹುಟ್ಟಿದ ನೆಲದ ಋಣ ತೀರಿಸಲು ತಮ್ಮ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಿರುವ ಕುರಿತು ಕನ್ನಡದಲ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವಜನತೆಗೆ ನಮ್ಮ ದೇಶ ಹಾಗೂ ನಾಡಿನ ಇತಿಹಾಸ ತಿಳಿಸಬೇಕು ಎಂದು ಹೇಳಿದ ಅವರು ಕನ್ನಡನಾಡಿನ ಬಸವೇಶ್ವರ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ಅರಿಯಬೇಕು ಎಂದರಲ್ಲದೇ, ಭಗತ್ ಸಿಂಗ್, ಝಾನ್ಸಿ ರಾಣಿಲಕ್ಷ್ಮೀಬಾಯಿ, ಅಲ್ಲೂರು ಸೀತಾರಾಮರಾಜು ಮೊದಲಾದ ಮಹನೀಯರನ್ನು ತಮ್ಮ ಮಾತುಗಳಲ್ಲಿ ಸ್ಮರಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಉಪಸ್ಥಿತರಿದ್ದರು.

ದೇಶಪಾಂಡೆ ಫೌಂಡೇಶ್‌ನ ಮಕ್ಕಳೊಂದಿಗೆ ವೆಂಕಯ್ಯ ನಾಯ್ಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT