‘ಸಮೀಕ್ಷೆ; ಶೀಘ್ರ ತೆರವು ಕಾರ್ಯಾಚರಣೆ ’
‘ಕಟ್ಟಡ ಪರವಾನಗಿ ನೀಡುವಾಗ ನಕ್ಷೆಯಲ್ಲಿ ತೋರಿಸಿದಂತೆ ಕಡ್ಡಾಯವಾಗಿ ವಾಹನಗಳ ನಿಲುಗಡೆಗೆ ಜಾಗ ಮೀಸಲಿಡಬೇಕು. ಆದರೆ ಅವಳಿನಗರದ ಕೆಲವು ಕಟ್ಟಡಗಳ ಮಾಲೀಕರು ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗುವುದು. ಪಾರ್ಕಿಂಗ್ ಜಾಗ ಅತಿಕ್ರಮಿಸಿ ನಿರ್ಮಿಸಿದ ಮಳಿಗೆಗಳ ತೆರವಿಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.