ಧಾರವಾಡ: ನಗರದ ಪರಿಸರ ಭವನದ ಮುಂಭಾಗದ ಕಟ್ಟಡದ ನೆಲ ಮಹಡಿಯಲ್ಲಿ ಸಂಗ್ರಹಿಸಿದ್ದ ಪಿಒಪಿ ಗಣಪತಿ ಮೂರ್ತಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು.
ನಗರದ ವಿವಿಧೆಡೆ ಗಣಪತಿ ಮೂರ್ತಿಗಳನ್ನು ಸಂಗ್ರಹಿಸಿಟ್ಟಿರುವ ಮಳಿಗೆಗಳ ಮೇಲೆ ಉಪವಿಭಾಗಾಧಿಕಾರಿ ಅಶೋಕ ತೇಲಿ ನೇತೃತ್ವದ ತಂಡ ದಿಢೀರ್ ಕಾರ್ಯಾಚರಣೆ ನಡೆಸಿ ಪಿಒಪಿ ಗಣಪತಿ ವಿಗ್ರಹಗಳನ್ನು ವಶಕ್ಕೆ ಪಡೆದರು.
ಸಿ.ಬಿ.ನಗರದ ಲಿಂಗಾಯತ ಭವನ ಪಕ್ಕದ ನಿರ್ಮಾಣ ಕಟ್ಟಡದಲ್ಲಿ ಮಂಜುನಾಥ ಬೆಳಗಾಂವಕರ ಅವರ ಮಳಿಗೆ ಪರಿಶೀಲಿಸಿದರು. ಪಿಒಪಿ, ಮಣ್ಣು ಮಿಶ್ರಿತ ಪಿಒಪಿ, ಕೃತಕ ಬಣ್ಣ ಲೇಪಿತ, ಉಸುಕು ಮಿಶ್ರಿತ ಪಿಒಪಿ ಗಣಪತಿ ಮೂರ್ತಿಗಳು ಕಂಡು ಬಂದಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ವಿಗ್ರಹ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಒಯ್ಯಲು ಸಂಗ್ರಹಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಐ.ಎಚ್. , ಪಾಲಿಕೆ ಪರಿಸರ ಅಧಿಕಾರಿ ಸಂತೋಷ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.