ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | 'ಕಾರ್ಮಿಕರು ಸುರಕ್ಷತೆಗೆ ಒತ್ತು ನೀಡಿ'

ನೈರುತ್ಯ ರೈಲ್ವೆ ಹುಬ್ಬಳ್ಳಿ ಘಟಕದ ಎಂಜಿನಿಯರ್‌ ಖಾಜಿ ಸಲಹೆ
Published 7 ಜುಲೈ 2024, 16:12 IST
Last Updated 7 ಜುಲೈ 2024, 16:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರೈಲ್ವೆ ಕಾರ್ಮಿಕರು ರೈಲು ಹಳಿಗಳ ಮೇಲೆ ಕಾರ್ಯನಿರ್ವಹಿಸುವ ಸಮಯದಲ್ಲಿ ಸುರಕ್ಷತೆಗೆ ಒತ್ತು ನೀಡಬೇಕು’ ಎಂದು ನೈರುತ್ಯ ರೈಲ್ವೆ ಎಂಜಿನಿಯರಿಂಗ್ ಶಾಖೆಯ ಹುಬ್ಬಳ್ಳಿ ಘಟಕದ ಎಂಜಿನಿಯರ್‌ ಶಫಿ ಖಾಜಿ ಕಾರ್ಮಿಕರಿಗೆ ಕಿವಿಮಾತು ಹೇಳಿದರು.

ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರೈಲ್ವೆ ನೌಕರರ ಸಂಘದ ಎಂಜಿನಿಯರಿಂಗ್ ಶಾಖೆಯ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಹಳಿಗಳ ದುರಸ್ತಿ ಕಾಮಗಾರಿ ಸಮಯದಲ್ಲಿ ಒತ್ತಡವಿರುತ್ತದೆ. ಎಲ್ಲರೂ ಸಹನೆ ಮತ್ತು ಸಹಕಾರದಿಂದ ಕಾರ್ಯ ನಿರ್ವಹಿಸುವ ಮೂಲಕ ಎಂಜಿನಿಯರಿಂಗ್ ಶಾಖೆಗೆ ಹೆಸರು ತರಬೇಕು’ ಎಂದರು.

ನಿರ್ಗಮಿತ ಎಂಜಿನಿಯರ್‌ ಜ್ಞಾನ ರಂಜನ್ ಪಾತ್ರಾ ಮಾತನಾಡಿ, ‘ನನ್ನ ಅವಧಿಯಲ್ಲಿ ಎಲ್ಲ ನೌಕರರು ಉತ್ತಮ ಸಹಕಾರ ನೀಡಿದ್ದಾರೆ’ ಎಂದು ಹೇಳಿದರು. ಬಾಲಾಜಿ, ಜಿ.ಎಂ. ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಎಂಜಿನಿಯರಿಂಗ್ ಶಾಖೆಯ ಅಧ್ಯಕ್ಷ ಸಂಪತ್ ಲಮಾಣಿ, ಖಜಾಂಚಿ ರವಿ, ಸದಸ್ಯರಾದ ಆರೂಢ, ಬಸವರಾಜ ಗುಣಶೇಖರ, ಶ್ರೀಕಾಂತ್, ಜಗದೀಶ ಭಜಂತ್ರಿ, ಸದಾನಂದ, ದೀಪಕ್, ಯಲ್ಲಪ್ಪ ಯರನಾಳ, ಬಸವರಾಜ ಹುಡೇದ, ರವಿ ಸೋಮಕ್ಕನವರ, ಲಕ್ಷ್ಮಣ ಮುಂದಿನಮನಿ, ಅಣ್ಣಪ್ಪ, ನಂದರಾಜ, ಸುನೀಲ್, ಆಂಜನೇಯಲು, ಕಾರ್ತಿಕ್, ಶಂಕರ ದುರ್ಗಾ, ಪರಸುರಾಮ, ಹರೀಶ್, ಅಕ್ಷಯ್, ಬಸವರಾಜ ಹೊಲ್ದೂರ ಮುತ್ತಪ್ಪ ಮಾದರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT