ಹುಬ್ಬಳ್ಳಿ: ಸಮಗ್ರ ಕೃಷಿ ಪದ್ಧತಿಯಡಿ ರೈತರು ಆರ್ಥಿಕವಾಗಿ ಸಬಲರಾಗಲಿ ಎಂಬ ಉದ್ದೇಶದಿಂದ ಧಾರವಾಡ ಸಮೀಪದ ತೇಗೂರಿನಲ್ಲಿರುವ ಉತ್ತರ ಕರ್ನಾಟಕದ ಏಕೈಕ ಸರ್ಕಾರಿ ಹಂದಿ ತಳಿ ಸಂವರ್ಧನಾ ಕೇಂದ್ರದಲ್ಲಿ ಹಂದಿ ಮರಿಗಳನ್ನು ಪೋಷಿಸಿ, ವಾರ್ಷಿಕವಾಗಿ 200 ಮರಿಗಳನ್ನು ಮಾರಲಾಗುತ್ತದೆ.

ಇಲ್ಲಿನ ಕೇಂದ್ರದಲ್ಲಿ 2022–23ನೇ ಸಾಲಿನಲ್ಲಿ ಹಂದಿಗಳ ಸಂವರ್ಧನೆ ಕಾರ್ಯ ಆರಂಭಿಸಲಾಯಿತು. ಅಮೆರಿಕದ ಡ್ಯುರಾಕ್, ಇಂಗ್ಲೆಂಡ್ನ ಯಾರ್ಕ್ಶೇರ್, ಡೆನ್ಮಾರ್ಕ್ನ ಲ್ಯಾಂಡ್ರೆಸ್ ತಳಿಯ ಒಟ್ಟು 65 ಹಂದಿಗಳಿವೆ. ಅವುಗಳ ಸಂಕರಣದ ಮೂಲಕ ಉತ್ತಮ ದರ್ಜೆಯ ಮರಿಗಳನ್ನು ಪಡೆದು, ರೈತರು, ಸಾಕಣೆದಾರರಿಗೆ ನೀಡಲಾಗುತ್ತಿದೆ.

‘ಈ ವಿದೇಶಿ ತಳಿಗಳು, ಹೆಚ್ಚು ಮರಿಗಳಿಗೆ ಜನ್ಮ ನೀಡುತ್ತವೆ. ಅವುಗಳನ್ನು ರೈತರು, ಸಾಕಣೆದಾರರು, ಹಂದಿ ಫಾರ್ಮ್ನವರು ಖರೀದಿಸುತ್ತಾರೆ. 8ರಿಂದ 10 ತಿಂಗಳಲ್ಲೇ ಅವುಗಳ ತೂಕ 100 ಕೆ.ಜಿ ತೂಕ ಬರುವುದರಿಂದ ಬೇಡಿಕೆ ಹೆಚ್ಚು’ ಎಂದು ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಅನಿಲ್ ಕುಮಾರ ಶೀಲವಂತಮಠ ತಿಳಿಸಿದರು.

‘3 ತಿಂಗಳವರೆಗಿನ ಮರಿಗಳಿಗೆ ಲಸಿಕೆ, ಜಂತುನಾಶಕ ಔಷಧಿ ನೀಡುತ್ತೇವೆ. ಇದರಿಂದ ಅವು ಸಾವಿಗೀಡಾಗುವ ಪ್ರಮಾಣ ಕಡಿಮೆ. ಉಳಿಕೆಯಾದ ಆಹಾರ, ಬೇಡವಾದ ತರಕಾರಿ, ಹಣ್ಣುಗಳೇ ಅವುಗಳಿಗೆ ಆಹಾರ. ಹಂದಿ ಮಾಂಸದಲ್ಲಿ ಉತ್ತಮ ಪೌಷ್ಟಿಕಾಂಶ ಇರುವ ಕಾರಣ ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ ₹160ರಿಂದ ₹225 ದರ ಇದೆ. ಹಾಸನ, ಮಂಡ್ಯ, ಗೋವಾ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇದೆ’ ಎಂದರು.

ಹಂದಿ ಸಾಕಣೆ ಅಸಹ್ಯವಲ್ಲ. ಆದಾಯದ ದೃಷ್ಟಿಯಿಂದ ಲಾಭದಾಯಕ. ಹಂದಿ ಸಾಕಣೆಯಿಂದ ಉತ್ತಮ ಆದಾಯ ಪಡೆಯುತ್ತಿರುವೆ
ಕಿರಣ ರೋಕಾ ಹಂದಿ ಸಾಕಣೆದಾರ ಧಾರವಾಡ

ಕೃಷಿ ಜತೆಗೆ ಹಂದಿ ಸಾಕಣೆ ಮಾಡುತ್ತಿರುವೆ. ಕೃಷಿ ಕೈಕೊಟ್ಟರೂ ಹಂದಿ ಸಾಕಣೆ ಭಾರಿ ಆದಾಯ ತಂದುಕೊಡುತ್ತಿದೆ
ವೆಂಕಟೇಶ ಚಂದ್ರೊಳ್ಳಿ ರೈತ ಹುಬ್ಬಳ್ಳಿ

ನಮ್ಮಲ್ಲಿ ಪ್ರಾಯೋಗಿಕವಾಗಿ ಹಂದಿ ಸಾಕಣೆ ಆರಂಭಿಸಿದ್ದರಿಂದ ಸದ್ಯ ಒಂದೇ ಶೆಡ್ ಇದೆ. ಇನ್ನೊಂದು ಶೆಡ್ಗೆ ಪ್ರಸ್ತಾವ ಸಲ್ಲಿಸಲಾಗಿದೆ

ಅನಿಲ್ ಕುಮಾರ ಶೀಲವಂತಮಠ ಮುಖ್ಯ ಪಶುವೈದ್ಯಾಧಿಕಾರಿ ತಳಿ ಸಂವರ್ಧನಾ ಕೇಂದ್ರ

ತಳಿ ಸಂವರ್ಧನೆಗೆ ಶತಮಾನಗಳ ಇತಿಹಾಸ

1910ರಲ್ಲಿ ಆರಂಭವಾದ ಎಮ್ಮೆ ತಳಿ ಸಂವರ್ಧನಾ ಕೇಂದ್ರವು 300 ಎಕರೆಗೂ ಹೆಚ್ಚು ಪ್ರದೇಶ ಹೊಂದಿದೆ. ಇಲ್ಲಿ 31 ಮುರ್ರಾ 33 ಸುರ್ತಿ ಎಂಬ ಉತ್ಕೃಷ್ಟ ತಳಿಯ ಎಮ್ಮೆಗಳಿವೆ. ಒಟ್ಟು 142 ಜಾನುವಾರುಗಳಿವೆ. ಇದೇ ಪ್ರದೇಶದಲ್ಲಿ ಹಂದಿ ತಳಿ ಸಂವರ್ಧನೆಯು ನೆರವೇರುತ್ತದೆ. ‘ಅಧಿಕ ಹಾಲಿನ ಇಳುವರಿ ನೀಡುವ ಈ ಎಮ್ಮೆಗಳ ಮೂಲಕ ಕೋಣಗಳನ್ನು ಉತ್ಪಾದಿಸಿ ಅವುಗಳ ವೀರ್ಯವನ್ನು ಘನೀಕೃತ ವೀರ್ಯ ಸಂಕರಣಾ ಕೇಂದ್ರಗಳಿಗೆ ನೀಡಲಾಗುತ್ತದೆ. ಪಶು ವೈದ್ಯಕೀಯ ಸಂಸ್ಥೆಗಳ ಮೂಲಕ ವೀರ್ಯ ನಳಿಕೆ ಕಡ್ಡಿ ಬಳಸಿ ರೈತರು ಸಲಹಿದ ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲಾಗುತ್ತದೆ. ಇದರಿಂದ ಹಾಲು ಉತ್ಪಾದನೆ ಹೆಚ್ಚಿ ರೈತರು ಮತ್ತು ಹೈನುಗಾರರು ಹೆಚ್ಚು ಆದಾಯ ಪಡೆಯಬಹುದು’ ಎಂದು ಅನಿಲ್ ಕುಮಾರ ಶೀಲವಂತಮಠ ಹೇಳಿದರು. ‘ಅಳಿವಿನ ಅಂಚಿನಲ್ಲಿರುವ ಕೃಷ್ಣಾ ವ್ಯಾಲಿ ಆಕಳು ತಳಿ ಉಳಿಸಲು ಇಲ್ಲಿ 70 ಆಕಳುಗಳನ್ನು ಪಾಲನೆ ಮಾಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.