ಶನಿವಾರ, ಜನವರಿ 25, 2020
22 °C

ಗದ್ದುಗೆ ಸ್ಥಾಪನೆ ವಿಚಾರ: ಸಮುದಾಯಗಳ ನಡುವೆ ಗಲಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂಸಿ: ಸಮೀಪದ ಹಾರನಹಳ್ಳಿಯಲ್ಲಿ ಮಾರಿಕಾಂಬ ದೇವಿಯ ಗದ್ದುಗೆ ಸ್ಥಾಪಿಸುವ ಸಂಬಂಧ ಭಾನುವಾರ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ನಡುವೆ ಗಲಭೆ ನಡೆದಿದೆ.

ಮಾರಿಕಾಂಬ ದೇವಿಯ ಗದ್ದುಗೆ ಇರುವ ಜಾಗದಲ್ಲಿ ಹಿಂದೂ ಸಮುದಾಯದವರು ಗದ್ದುಗೆ ಸ್ಥಾಪಿಸಲು ಮುಂದಾದಾಗ, ‘ಮುಸ್ಲಿಂ ಸಮುದಾಯದವರು ಗದ್ದುಗೆವರೆಗಿನ ಜಾಗ ನಮಗೆ ಸೇರಿದ್ದು, ಇಲ್ಲಿ ಗದ್ದುಗೆ ಸ್ಥಾಪಿಸಬಾರದು ಎಂದರು. ಆಗ  ಹಿಂದೂ ಸಮುದಾಯದವರು ಜಾಗ ನಮಗೆ ಸೇರಿದ್ದು ಎಂದಾಗ ಮಾತಿನ ಚಕಮಕಿ ನಡೆಯಿತು. ಜಗಳ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ, ಎಸ್‌ಪಿ ಶಾಂತರಾಜ್, ಡಿವೈಎಸ್‌ಪಿ, ತಹಶೀಲ್ದಾರ್, ಪಿಎಸ್ಐ ಸೇರಿ ಪೊಲೀಸ್ ಸಿಬ್ಬಂದಿ ಗಲಭೆ ನಿಯಂತ್ರಿಸಿದರು.

ಎರಡೂ ಸಮುದಾಯಗಳ ಅಹವಾಲು ಆಲಿಸಿದ ಶಾಸಕ ಅಶೋಕ್ ನಾಯ್ಕ, ‘ಎರಡು ಸಮುದಾಯದವರು ಜಾಗದ ದಾಖಲೆಗಳನ್ನು ತನ್ನಿ, ದಾಖಲೆಗಳನ್ನು ಪರಿಶೀಲಿಸಿ ಸೋಮವಾರ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಮನವೊಲಿಸಿದರು. ಬಳಿಕ ಪರಿಸ್ಥಿತಿ ಶಾಂತವಾಯಿತು.

ಮುಂಜಾಗ್ರತಾ ಕ್ರಮವಾಗಿ ಹಾರನಹಳ್ಳಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು