ರೋಣ: ಪಟ್ಟಣದ ಪೋತರಾಜನ ಕಟ್ಟೆಯ ಬಳಿ ಬುಧವಾರ ಕಾರ ಹುಣ್ಣಿಮೆಯ ಅಂಗವಾಗಿ ಸಾಂಪ್ರದಾಯಿಕ ಕರಿ ಹರಿಯುವ ಕಾರ್ಯಕ್ರಮ ಜರುಗಿದ್ದು, ಕಂದು ಬಣ್ಣದ ಹೋರಿ ಈ ವರ್ಷದ ಕರಿ ಹರಿಯಿತು.

ಪ್ರತಿ ವರ್ಷ ಕರಿ ಹರಿಯುವ ಸಂಪ್ರದಾಯ ಪಟ್ಟಣದಲ್ಲಿ ಏರ್ಪಡಿಸಲಾಗುತ್ತದೆ. ಬೆಳಿಗ್ಗೆ ಎತ್ತುಗಳನ್ನು ಸಿಂಗರಿಸಿ, ಪೂಜಿಸಲಾಗುತ್ತದೆ. ಬಿಳಿ ಮತ್ತು ಕಂದು ಬಣ್ಣದ ಹೋರಿಗಳನ್ನು ಓಡಿಸುವ ಮೂಲಕ ಪ್ರಸಕ್ತ ವರ್ಷದ ಫಸಲಿನ ಭವಿಷ್ಯ ಅರಿಯುವ ಸಂಪ್ರದಾಯವಿದೆ.

ಬಿಳಿ ಹೋರಿ ಕರಿ ಹರಿದರೆ ಮುಂಗಾರಿನ ಬೆಳೆಗಳು ಹಾಗೂ ಬಿಳಿ ಜೋಳ ಉತ್ತಮವಾಗಿ ಬೆಳೆಯುತ್ತದೆ. ಕಂದು ಬಣ್ಣದ ಹೋರಿ ಕರಿ ಹರಿದರೆ ಹಿಂಗಾರಿನ ಬೆಳೆಗಳಾದ ಕಡಲೆ ಮತ್ತು ಗೋಧಿ ಉತ್ತಮವಾಗಿ ಬೆಳೆಯುತ್ತವೆ ಎಂಬುದು ಈ ಭಾಗದ ರೈತರ ನಂಬಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.