ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ಸಂಶಯಾಸ್ಪದ ಓಡಾಟ: ಅಪರಿಚಿತರ ಬಂಧನ

Published 7 ಜುಲೈ 2024, 16:04 IST
Last Updated 7 ಜುಲೈ 2024, 16:04 IST
ಅಕ್ಷರ ಗಾತ್ರ

ಮುಂಡರಗಿ: ಸಂಶಯಾಸ್ಪದವಾಗಿ ಗ್ರಾಮದ ಹೊರ ವಲಯದಲ್ಲಿ ಸಂಚರಿಸುತ್ತಿದ್ದ ಅಪರಿಚಿತರನ್ನು ಕಳ್ಳರೆಂದು ಭಾವಿಸಿ ಅವರನ್ನು ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಕೂಡಿಹಾಕಿರುವ ಘಟನೆ ತಾಲ್ಲೂಕಿ ಹಮ್ಮಿಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.‌

ಗ್ರಾಮದಲ್ಲಿ ಹಲವು ದಿನಗಳಿಂದ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ರಾತ್ರಿ ಕಳ್ಳರು ಗ್ರಾಮದ ಜಮೀನುಗಳ ಪಂಪ್‌ಸೆಟ್, ಕುರಿ, ಮೇಕೆ ಮೊದಲಾದವುಗಳನ್ನು ಕಳ್ಳರು ದೋಚುತ್ತಿದ್ದರು. ಶನಿವಾರ ರಾತ್ರಿ ಜಮೀನು ಹಾಗೂ ಕಾಲುವೆಯ ಪಕ್ಕದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಐವರನ್ನು ಕೂಡಿಹಾಕಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಅಪರಿಚಿತರು ಗ್ರಾಮದ ಹೊರವಲಯದಲ್ಲಿ ಸಂಚರಿಸುವ ವೇಳೆ ಗ್ರಾಮಸ್ಥನೊಬ್ಬರು ಅವರನ್ನು ನೋಡಿದ್ದಾರೆ. ತಕ್ಷಣ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಜಮೀನಿಗೆ ಬಂದು ಅಪರಿಚಿತರನ್ನು ಹಿಡಿದುಕೊಂಡು ಗ್ರಾಮಕ್ಕೆ ತೆರಳಿದ್ದಾರೆ. ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಅವರನ್ನು ಕೂಡಿಹಾಕಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಪೊಲೀಸರು ರಾತ್ರಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರು ಕೂಡಿಹಾಕಿದ್ದ ಐವರು ಅಪರಿಚಿತರನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಸಂಶಯಾಸ್ಪದ ಓಡಾಟದ ಮೇಲೆ ಅವರ ವಿರುದ್ಧ ದೂರು ದಾಖಲಿಸಿಕೊಂಡು, ತನಿಕೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT