ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವಯವ ಕೃಷಿಗೆ ಆದ್ಯತೆ ನೀಡಲು ಸಲಹೆ

Published 3 ಜುಲೈ 2024, 14:40 IST
Last Updated 3 ಜುಲೈ 2024, 14:40 IST
ಅಕ್ಷರ ಗಾತ್ರ

ನರೇಗಲ್: ಮಣ್ಣಿನ ಪೋಷಕಾಂಶ ಕಾಪಾಡಿಕೊಳ್ಳಲು ಸಾವಯವ, ಸಾಂಪ್ರದಾಯಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿತಜ್ಞ ಆತೀಶ ಪಾಟೀಲ ಹೇಳಿದರು.

ಪಟ್ಟಣದ ಹಳೆ ಬಜಾರದ ರೈತ ಸಮೃದ್ಧಿ ಕೇಂದ್ರದಲ್ಲಿ ರೈತರಿಗಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್ಗೇನಿಕ್ ಗೊಬ್ಬರ ಮತ್ತು ಔಷಧೋಪಚಾರ ಕುರಿತು ಮಾತನಾಡಿದರು.

ಆಧುನಿಕ ಪದ್ದತಿಯಲ್ಲಿ ರಾಸಾನಿಕ ಗೊಬ್ಬರ ಹಾಗೂ ಔಷಧೋಪಚಾರ ವಿಷಕಾರಿಯಾಗಿ ಪರಿವರ್ತನೆಯಾಗಿದೆ. ಇದರಿಂದ ಮಣ್ಣಿನಲ್ಲಿ ಇರಬೇಕಾದ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕಡಿಮೆಯಾಗಿವೆ. ಇದು ಹಿಗೆಯೇ ಮುಂದುವರೆದರೆ ಮುಂದಿನ 60 ವರ್ಷಗಳಲ್ಲಿ ನಮ್ಮ ಕೃಷಿ ಭೂಮಿ ತನ್ನ ಮೂಲ ಸ್ವರೂಪವನ್ನೆ ಕಳೆದುಕೊಂಡು ಬಂಜರು ಭುಮಿಯಾಗಲಿದೆ. ಆದ್ದರಿಂದ ರೈತರು ಸಾವಯವ ಕೃಷಿ ಮೂಲಕ ಭೂಮಿಯ ಆರೋಗ್ಯದ ಕಡೆಗೆ ಆದ್ಯತೆ ನೀಡಬೇಕಿದೆ ಎಂದರು.

ಇನ್ನೊರ್ವ ಕೃಷಿ ತಜ್ಞ ರವೀಂದ್ರ ಉಪಾದ್ಯ ಮಾತನಾಡಿ, ಮಣ್ಣಿನ ಪೋಷಕಾಂಶ, ಮಣ್ಣಿನ ಸಾಂದ್ರತೆ, ಸವಕಳಿ ಕುರಿತು ರೈತರಿಗೆ ತಿಳಿಸಿದರು.

ನರೇಗಲ್ ರೈತ ಸಮೃದ್ದಿ ಕೇಂದ್ರದ ಅಧ್ಯಕ್ಷ ಜಗದೀಶ ಸಂಕನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ರೈತರಾದ ಬಾಳಪ್ಪ ಸೋಮಗೊಂಡ, ಡಾ. ಆರ್. ಕೆ. ಗಚ್ಚಿನಮಠ, ಶ್ರೀಧರ ಕುಲಕರ್ಣಿ, ಮಲ್ಲನಗೌಡ ಪಾಟೀಲ, ಸಿದ್ದಪ್ಪ ರಾಗಿ, ಉಮೇಶಗೌಡ ಪಾಟೀಲ, ಈರಣ್ಣ ಧರಣೆಪ್ಪಗೌಡ್ರ, ಶಿವನಗೌಡ ಕಡದಳ್ಳಿ, ಕಲ್ಲಪ್ಪ ಕಡೆತೋಟದ, ರವಿ ಮ್ಯಾಗೇರಿ, ಸ್ವಗ್ರಾಮ ಮಿತ್ರ ಚನಬಸಪ್ಪ ಕುಷ್ಟಗಿ, ಶಿವಕುಮಾರ ಮಾವಿನಕಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT