ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಪಿಜಿ ಸಂಗೀತ ಕಾಲೇಜಿನಲ್ಲಿ ಬಸವ ಜಯಂತಿ

Published 12 ಮೇ 2024, 14:32 IST
Last Updated 12 ಮೇ 2024, 14:32 IST
ಅಕ್ಷರ ಗಾತ್ರ

ಗದಗ: ವರ್ಣಭೇದ ಪದ್ಧತಿ, ಮೇಲು ಕೀಳು ಎಂಬ ತಾರತಮ್ಯ, ಲಿಂಗಭೇದ ನೀತಿ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಿಸಲು ಪ್ರಯತ್ನಿಸಿದವರು ವಿಶ್ವಗುರು ಬಸವಣ್ಣ ಎಂದು ಪ್ರಾಂಶುಪಾಲೆ ಸುಮಿತ್ರಾ ಹಿರೇಮಠ ಹೇಳಿದರು.

ನಗರದ ಡಾ. ಪಿಜಿಎ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಕನ್ನಡ ಉಪನ್ಯಾಸಕ ವಿ.ಎಂ.ಗುರುಮಠ ಮಾತನಾಡಿ, ವಚನ ಸಾಹಿತ್ಯವು ಅಮೂಲ್ಯ ವಿಚಾರಧಾರೆಗಳನ್ನು ಹೊಂದಿದ್ದು ಇಡೀ ವಿಶ್ವದ ಮನುಕುಲವೇ ಬೆರಗಾಗುವಂತಹ ಕಾರ್ಯ 12ನೇ ಶತಮಾನದಲ್ಲಿ ಭಕ್ತಿ ಭಂಡಾರ ಬಸವಣ್ಣ ಅವರಿಂದ ನಡೆಯಿತು ಎಂದು ಹೇಳಿದರು.

ಉಪನ್ಯಾಸಕ ಗಂಗಾಧರ ಹಿಡಿಕಿಮಠ ಮಾತನಾಡಿ, ವಚನ ಸಾಹಿತ್ಯ ಬೆಳೆಸುವುದರಲ್ಲಿ ಸಂಗೀತಗಾರರ ಪಾತ್ರ ಅಮೂಲ್ಯವಾಗಿದೆ ಎಂದು ಹೇಳಿದರು.

ಸಾಕ್ಷಿ ಅವರು ರಚಿಸಿರುವ ‘ಸೋಲಾದರೇನಂತೆ’ ಎಂಬ ಗ್ರಂಥ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು.

ಪ್ರಾಧ್ಯಾಪಕರಾದ ನಾರಾಯಣ ಹಿರೇಕೊಳಚಿ, ಲತಾ ವೃತ್ತಿಕೊಪ್ಪ, ಎಸ್.ಎಸ್.ಗಡ್ಡದಮಠ, ಕೊಡಗಾನೂರ ಹನುಮಂತ, ಉಪನ್ಯಾಸಕರಾದ ಎನ್.ಎಂ.ಶೇಕ್, ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವೈ.ಆರ್‌.ಮೂಲಿಮನಿ, ವಿ.ಎಂ.ಪಟ್ಟದಕಲ್ಲು ಇದ್ದರು.

ವಿದ್ಯಾರ್ಥಿಗಳಾದ ರಾಹುಲ್ ರಾಠೋಡ್, ಶ್ರುತಿ ಪವನ್, ವಿಜಯಲಕ್ಷ್ಮಿ ಹಿರೇಮಠ , ರಂಜಿತಾ ಬಡಿಗೇರ, ಕೃತಿ ಸುಲಾಕೆ, ಸಂಗೀತ ಡಿ ಎಂ., ಸುಮತಿ ಮುರುಗೋಡ್, ರಾಹುಲ್ ರಾಠೋಡ, ಅನಘಾ ಕುಲಕರ್ಣಿ, ಯಶೋದಾ ಮಾದರ ವಚನ ಗಾಯನ ಮಾಡಿದರು.

ಕೃತಿ ಸುಲಾಕೆ ಸ್ವಾಗತಿಸಿದರು. ರಂಜಿತಾ ಬಡಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT