ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಅಭಿವೃದ್ಧಿ ಕೆಲಸ ನಿರಂತರ: ಜಿ.ಎಸ್‌.ಪಾಟೀಲ

Published 31 ಜನವರಿ 2024, 15:43 IST
Last Updated 31 ಜನವರಿ 2024, 15:43 IST
ಅಕ್ಷರ ಗಾತ್ರ

ಡಂಬಳ: ರಾಜ್ಯದಲ್ಲಿ ಬಿಜೆಪಿಗೆ ಸುಳ್ಳೇ ಬಂಡವಾಳವಾಗಿದೆ. ಅವರ ಸುಳ್ಳುಗಳ ಮಾತುಗಳಿಗೆ ಬೆಲೆ ಇಲ್ಲವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅನುದಾನಕ್ಕೆ ಸರ್ಕಾರದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಶಾಸಕ ಜಿ.ಎಸ.ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಬರದೂರ ಗ್ರಾಮದಿಂದ ತಾಮ್ರಗುಂಡಿ ಗ್ರಾಮಕ್ಕೆ ₹ 2 ಕೋಟಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮತ್ತು ₹ 13 ಲಕ್ಷ ವೆಚ್ಚದ ವಿವೇಕ ಶಾಲಾ ಕೊಠಡಿ ಯೋಜನೆಯಡಿ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಬರದ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದರು ಕೂಡ ಅನುದಾನ ನೀಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎನ್.ಡಿ.ಆರ್.ಎಫ್. ಅನುದಾನ ಬಿಡುಗಡೆಯಾಗಿಲ್ಲ, ಖುದ್ದು ಮುಖ್ಯಮಂತ್ರಿ ಅವರು ರೈತರ, ಕೂಲಿಕಾರ್ಮಿಕರ ಹಿತಕ್ಕಾಗಿ ದೆಹಲಿಗೆ ತೆರಳಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮೋದಿ ಅವರನ್ನು ಭೇಟಿ ಮಾಡಿ ಬರ ಪರಿಹಾರ ನಿಧಿ ಬಿಡುಗಡೆಗೆ ಮನವಿ ಮಾಡಿದ್ದರೂ ಕೂಡಾ ಈ ಕ್ಷಣದವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಮಿಥುನ.ಜಿ.ಪಾಟೀಲ್, ಗವಿಸಿದ್ದಯ್ಯ ಹಿರೇಮಠ, ಮುಖಂಡ ಯಲ್ಲಪ್ಪ ಹುಲಗೇರಿ, ಅಮರೇಶ ಹಿರೇಮಠ, ದೇವಪ್ಪ ಚಿಕ್ಕಣ್ಣವರ, ರವಿ ವಡ್ಡರ, ನಿಂಗಪ್ಪ ಕವಲೂರ, ಮೇಲಾರಪ್ಪ ಕವಲೂರ, ಬಸಪ್ಪ ರೇವಣ್ಣವರ, ಹಾಲಪ್ಪ ಮಾದರ, ಸೋಮಪ್ಪ ಹೈತಾಪುರ, ಬಸಪ್ಪ ಬಂಡಿ, ಪರಮೇಶಪ್ಪ ರೇವಣ್ಣವರ, ಮಹಾದೇವಪ್ಪ ರೇವಣ್ಣವರ, ಹನಮಪ್ಪ ಶಿರಹಟ್ಟಿ, ಮಂಜುನಾಥ ಬೂದಿಹಾಳ, ಪಿಡಬ್ಲುಡಿ ಎಇಇ ಎಂ.ಎಸ್‌.ಪಾಟೀಲ, ಸಹಾಯಕ ಎಂಜಿನಿಯರ್‌ ನಾಗೇಂದ್ರ ಪಟ್ಟಣ್ಣಶೆಟ್ಟಿ ಮುಂತಾದವರು ಇದ್ದರು.

ಡಂಬಳ ಹೋಬಳಿ ಬರದೂರ ಗ್ರಾಮದಿಂದ ತಾಮೃಗುಂಡಿ ಗ್ರಾಮದಲ್ಲಿ 13ಲಕ್ಷರೂ ವೆಚ್ಚದಲ್ಲಿ ನಿರ್ಮಾಣವಾದ ವಿವಿವೇಕ ಯೋಜನೆಯಡಿಯ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು  ರೋಣ ಮತಕ್ಷೇತ್ರದ ಶಾಸಕ ಜಿ.ಎಸ.ಪಾಟೀಲ ಉದ್ಘಾಟಿಸಿದರು.
ಡಂಬಳ ಹೋಬಳಿ ಬರದೂರ ಗ್ರಾಮದಿಂದ ತಾಮೃಗುಂಡಿ ಗ್ರಾಮದಲ್ಲಿ 13ಲಕ್ಷರೂ ವೆಚ್ಚದಲ್ಲಿ ನಿರ್ಮಾಣವಾದ ವಿವಿವೇಕ ಯೋಜನೆಯಡಿಯ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು  ರೋಣ ಮತಕ್ಷೇತ್ರದ ಶಾಸಕ ಜಿ.ಎಸ.ಪಾಟೀಲ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT